nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸರಗೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಮಹಿಳೆಗೆ ಗಂಭೀರ ಗಾಯ; ಆಕ್ರೋಶ

    June 23, 2026

    ಸರಗೂರು: ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಕ್ರಮ ಚಾಲನೆ

    June 23, 2026

    ಭಯ ಬೇಡ, ಪೊಲೀಸರನ್ನು ಸಮುದಾಯದ ಭಾಗವಾಗಿ ಕಾಣಿ: ಸಿಪಿಐ ಶ್ರೀನಿವಾಸ್ ಡಿಜೆ

    June 23, 2026
    Facebook Twitter Instagram
    ಟ್ರೆಂಡಿಂಗ್
    • ಸರಗೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಮಹಿಳೆಗೆ ಗಂಭೀರ ಗಾಯ; ಆಕ್ರೋಶ
    • ಸರಗೂರು: ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಕ್ರಮ ಚಾಲನೆ
    • ಭಯ ಬೇಡ, ಪೊಲೀಸರನ್ನು ಸಮುದಾಯದ ಭಾಗವಾಗಿ ಕಾಣಿ: ಸಿಪಿಐ ಶ್ರೀನಿವಾಸ್ ಡಿಜೆ
    • ತುಮಕೂರು: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ
    • ಸಾಗುವಳಿದಾರ ರೈತರ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ಆರೋಪ; ಕೆಪಿಟಿಸಿಎಲ್ ಖಾಸಗೀಕರಣಕ್ಕೆ ತೀವ್ರ ಆಕ್ರೋಶ
    • ಕದ್ದ ಹಣದಲ್ಲಿ ದಂಪತಿ ಮೋಜು–ಮಸ್ತಿ: ಕೊನೆಗೂ ಕುಣಿಗಲ್ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಜೋಡಿ!
    • ಏಕಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಲೇರಿಯಾ ಜಾಗೃತಿ ಹಾಗೂ ಆರೋಗ್ಯ ಶಿಕ್ಷಣ
    • ಸರಗೂರು: ಲಯನ್ಸ್ ಅಕಾಡೆಮಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ PDO ಮತ್ತು ಅಧ್ಯಕ್ಷೆಯನ್ನು ವಜಾ ಮಾಡಲು ಒತ್ತಾಯ
    ಕೊರಟಗೆರೆ August 17, 2022

    ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ PDO ಮತ್ತು ಅಧ್ಯಕ್ಷೆಯನ್ನು ವಜಾ ಮಾಡಲು ಒತ್ತಾಯ

    By adminAugust 17, 2022No Comments2 Mins Read
    koratagere

    Provided by
    Provided by

    ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೂದಾಗವಿ (ಸಿದ್ದರಬೆಟ್ಟ)ಗ್ರಾಮ ಪಂಚಾಯಿತಿ ಕಚೇರಿಯ ಆವರಣದಲ್ಲಿರುವ ಧ್ವಜಸ್ಕಂಭದಲ್ಲಿ ದಿನಾಂಕ 13/08/2022 ರ ರಾತ್ರಿ 2 ಗಂಟೆಯವರೆಗೂ ರಾಷ್ಟ್ರಧ್ವಜವನ್ನು ಕೆಳಗಿಳಿಸದೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಘಟನೆ ನಡೆದಿತ್ತು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜು ಮಲ್ಲೇಕಾವು ಮಾತನಾಡಿ,  ಸಿದ್ದರಬೆಟ್ಟ ಗ್ರಾಮ ಪಂಚಾಯಿತಿಯ ಕಚೇರಿ ಆವರಣದಲ್ಲಿರುವ ಧ್ವಜಸ್ತಂಭದಲ್ಲಿ ದಿನಾಂಕ 13/08/2022 ರ ಬೆಳಗ್ಗೆ ಹಾರಿಸಿದ ತ್ರಿವರ್ಣ ಧ್ವಜವನ್ನು ರಾತ್ರಿ ಇಡೀ ಕೆಳಗಿಳಿಸದೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ಕಾನೂನು ಉಲ್ಲಂಘನೆಯನ್ನು ಮಾಡಿರುವ ಘಟನೆ ನಡೆದಿದೆ. ರಾಷ್ಟ್ರಧ್ವಜ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವಿಜಯ ಕುಮಾರಿ ಹಾಗೂ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ ಮತ್ತು ಪಂಚಾಯಿತಿ ಅಧ್ಯಕ್ಷೆ ವಿನೋದ ನವೀನ್ ಕುಮಾರ್ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಿಳಿಸಿದರು.

    ರಾಷ್ಟ್ರಧ್ವಜದ ವಿಚಾರವಾಗಿ  ಕೇಂದ್ರ ಸರ್ಕಾರದ ಆದೇಶವನ್ನ ಗಾಳಿಗೆ ತೂರಿದ ಘಟನೆಯು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಸುದ್ದಿ ಹೊರಬಂದಿತ್ತು ಮತ್ತು ಸ್ಥಳೀಯರಿಂದ ನಮ್ಮಗಳ ಗಮನಕ್ಕೆ ಈ ವಿಚಾರ ಬಂದಿತ್ತು. ನಾವು ತಕ್ಷಣವೇ ಪಿಡಿಓ ರವರ ಗಮನಕ್ಕೆ ವಿಷಯವನ್ನು ತಂದೆವು ಆದರೂ ಕೂಡ ಪಿಡಿಓ ಬೇಜವಾಬ್ದಾರಿ ಉತ್ತರವನ್ನು ನೀಡುತ್ತಾರೆ. ಆದ್ದರಿಂದ ದೇಶದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಪಿಡಿಓ,ಅಧ್ಯಕ್ಷರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಅಂಜನಾದ್ರಿ ವೀರಭದ್ರಯ್ಯ ಒತ್ತಾಯಿಸಿದರು.

    ಇದೇ ಸಂದರ್ಭದಲ್ಲಿ ಮಲ್ಲೇಕಾವು ಕ್ಷೇತ್ರದ ಗ್ರಾಮ ಪಂಚಾಯತಿ ಸದಸ್ಯ ಗೋವಿಂದರಾಜು ಮಾತನಾಡಿ,  ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆಯ ವಿಚಾರವಾಗಿ ಕೆಲವು ದೃಶ್ಯ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೂ ಸಹ ಇಲ್ಲಿಯವರೆಗೂ ಕೂಡ ಪಿಡಿಒ ಮತ್ತು ಅಧ್ಯಕ್ಷೆಯ ಮೇಲೆ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿಯಿಂದ ಯಾವುದೇ ರೀತಿಯ ಕಾನೂನು ಕ್ರಮ ಆಗಿರುವುದಿಲ್ಲ. ಆದ್ದರಿಂದ ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


    Provided by
    Provided by

    ಒಕ್ಕೂಟ ಭಾರತ ಭಾರತ ಸರ್ಕಾರದ ಆದೇಶದಂತೆ ಸರ್ಕಾರಿ ಕಚೇರಿಗಳಲ್ಲಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿದಿನವೂ ತ್ರಿವರ್ಣ ಧ್ವಜವನ್ನು ಹಾರಿಸಿ ಸಂಜೆ ಸೂರ್ಯಸ್ತವಾಗುವ ಒಳಗೆ ತ್ರಿವರ್ಣ ಧ್ವಜವನ್ನು ಧ್ವಜಸ್ತಂಭದಿಂದ ಗೌರವ ಪೂರ್ವಕವಾಗಿ ಇಳಿಸಬೇಕೆಂಬ ಆದೇಶವನ್ನು ಪಾಲಿಸದೆ, ಕಾನೂನು ಉಲ್ಲಂಘನೆ ಮಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯ ಕುಮಾರಿ ಮತ್ತು ಅಧ್ಯಕ್ಷೆ ವಿನೋದ ನವೀನ್ ಕುಮಾರ್ ರವರನ್ನು ಅಮಾನತ್ತು ಮಾಡಬೇಕು ಎಂದು ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ ಆರ್ ಶಂಕರ್ ಗೌಡ್ರು ಒತ್ತಾಯಿಸಿದ್ದಾರೆ.

    ಕಳೆದ ನಾಲ್ಕು ದಿನಗಳಿಂದಲೂ ಕರ್ನಾಟಕ ರಣಧೀರರ ವೇದಿಕೆಯ ಕೊರಟಗೆರೆ ತಾಲ್ಲೂಕು ಘಟಕ ಕಾನೂನು ರೀತಿಯ ಹೋರಾಟ ಮಾಡುತ್ತಿದ್ದು ಕೆಲವು ದೃಶ್ಯ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ವರದಿಯಾದರು ಕೂಡ ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ ತಪ್ಪಿತಸ್ಥರ ಪರವಾಗಿ ನಿಂತಿದೆಯಾ ಎಂದು ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    20 ಜೋಡಿಗಳ ಸಾಮೂಹಿಕ ವಿವಾಹ: 10 ಸಾವಿರ ಗ್ರಂಥ ದಾಸೋಹಕ್ಕೆ ಚಾಲನೆ | ಬದುಕಿನ ವಿಕಾಸಕ್ಕೆ ಧರ್ಮವೇ ಅಡಿಪಾಯ: ಶ್ರೀರಂಭಾಪುರಿ ಜಗದ್ಗುರು

    June 22, 2026

    ಅಕ್ಕಿರಾಂಪುರ ಸಂತೆ ಮೈದಾನ ಹಾಗೂ ಕೆಬಿಜಿವಿ ವಿದ್ಯಾರ್ಥಿ ನಿಲಯ ಪರಿಶೀಲನೆ ನಡೆಸಿದ ಇಒ ಅಪೂರ್ವ ಸಿ.

    June 19, 2026

    ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ರೋಟರಿ ಸಂಸ್ಥೆ ಮಹತ್ವದ ಹೆಜ್ಜೆ: ತಹಶೀಲ್ದಾರ್ ಮಂಜುನಾಥ್ ಕೆ.

    June 19, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸರಗೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಮಹಿಳೆಗೆ ಗಂಭೀರ ಗಾಯ; ಆಕ್ರೋಶ

    June 23, 2026

    ಸರಗೂರು: ಇಲ್ಲಿನ ಪಟ್ಟಣದ ಬಸ್ ನಿಲ್ದಾಣದ ಮುಖ್ಯದ್ವಾರದಲ್ಲಿ ಸೋಮವಾರ ಸಂಜೆ ಕೆಎಸ್ಆರ್ಟಿಸಿ ಬಸ್ ಹರಿದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ…

    ಸರಗೂರು: ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಕಾರ್ಯಕ್ರಮ ಚಾಲನೆ

    June 23, 2026

    ಭಯ ಬೇಡ, ಪೊಲೀಸರನ್ನು ಸಮುದಾಯದ ಭಾಗವಾಗಿ ಕಾಣಿ: ಸಿಪಿಐ ಶ್ರೀನಿವಾಸ್ ಡಿಜೆ

    June 23, 2026

    ತುಮಕೂರು: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

    June 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.