nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೊಡಿಗೇನಹಳ್ಳಿ: ಬಸ್‌ ನಿಲ್ದಾಣದಲ್ಲಿ ಬಿದ್ದಿದ್ದ ಚಿನ್ನದ ನೆಕ್ಲೇಸ್‌ ಕದ್ದ ಮಹಿಳೆ ಬಂಧನ

    May 9, 2026

    ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸೇರಿ ನಾಲ್ವರು ಸಾವು

    May 9, 2026

    ಮೇ 12 ರಂದು ಡಾ.ಜಿ.ಎಸ್.ಸಿದ್ದಲಿಂಗಯ್ಯನವರ ಬದುಕು–ಬರಹ ವಿಚಾರ ಸಂಕಿರಣ, ದತ್ತಿ ಪ್ರಶಸ್ತಿ ಸಮಾರಂಭ

    May 9, 2026
    Facebook Twitter Instagram
    ಟ್ರೆಂಡಿಂಗ್
    • ಕೊಡಿಗೇನಹಳ್ಳಿ: ಬಸ್‌ ನಿಲ್ದಾಣದಲ್ಲಿ ಬಿದ್ದಿದ್ದ ಚಿನ್ನದ ನೆಕ್ಲೇಸ್‌ ಕದ್ದ ಮಹಿಳೆ ಬಂಧನ
    • ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸೇರಿ ನಾಲ್ವರು ಸಾವು
    • ಮೇ 12 ರಂದು ಡಾ.ಜಿ.ಎಸ್.ಸಿದ್ದಲಿಂಗಯ್ಯನವರ ಬದುಕು–ಬರಹ ವಿಚಾರ ಸಂಕಿರಣ, ದತ್ತಿ ಪ್ರಶಸ್ತಿ ಸಮಾರಂಭ
    • ಸಿರಾ: ಶಿಕ್ಷಕರ ತರಬೇತಿ ಸಂಸ್ಥೆ ದಾಖಲಾತಿ ಪ್ರಾರಂಭ
    • ತುರುವೇಕೆರೆ: ಹೆಗ್ಗೆರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ
    • ತೆರೆ ಮೇಲೆ ರಾಜ್‌ ಕುಮಾರ್‌, ಅಂತರಂಗದಲ್ಲಿ ಮುತ್ತುರಾಜ್‌ ಇದ್ದರು: ಆರ್‌. ಮಂಜುನಾಥ್‌ ಚವಾಣ್‌, ನಾದಯೋಗಿ ಡಾ.ರಾಜಕುಮಾರ್ ಪುಸ್ತಕ ಬಿಡುಗಡೆ
    • ಕಾರವಾರ: ಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ: ನ್ಯಾ.ಕವಿತಾ ಎಸ್.ಉಂಡೋಡಿ
    • ಧಾರವಾಡ: ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪುತ್ರನ ವಿವಾಹ ಕಾರ್ಯಕ್ರಮದಲ್ಲಿ 45 ವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕ ವಿತರಿಸಿದ BPS ಮುಖಂಡ
    ಪಾವಗಡ August 18, 2022

    ಪುತ್ರನ ವಿವಾಹ ಕಾರ್ಯಕ್ರಮದಲ್ಲಿ 45 ವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕ ವಿತರಿಸಿದ BPS ಮುಖಂಡ

    By adminAugust 18, 2022No Comments2 Mins Read
    pavagada

    ಪಾವಗಡ: ತಮ್ಮ ಪುತ್ರನ ವಿವಾಹ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ತಮ್ಮ ಸಮುದಾಯದ 45 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ನೋಟ್ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ವಿದ್ಯಾಭ್ಯಾಸಕ್ಕೆ ವಿಶೇಷ ಪ್ರೋತ್ಸಾಹವನ್ನು ನೀಡಿ ಮಾದರಿಯಾಗಿದ್ದಾರೆ.

    ಪಾವಗಡ ತಾಲೂಕು ನಿಡಗಲ್ಲು ಹೋಬಳಿ ಹರಿಹರಪುರ ಗ್ರಾಮದಲ್ಲಿ ಈ ವಿಶೇಷ ವಿವಾಹ ನಡೆದಿದ್ದು, ಭಾರತೀಯ ಪರಿವರ್ತನಾ ಸಂಘದ ಪೋಷಕರಾಗಿರುವ ಹನುಮಂತರಾಯಪ್ಪ ಅವರ ಪುತ್ರ ಹೆಚ್.ರಾಜು ಹಾಗೂ ನೇಹಾ ಅಲಿಯಾಸ್ ಚಂದನ ಎ. ಅವರ ವಿವಾಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದಾರೆ.


    Provided by
    Provided by

    ಈ ವೇಳೆ ಮಾತನಾಡಿದ ಹನುಮಂತರಪ್ಪ, ನಮ್ಮ ನಾಲ್ಕು ಜನ ಮಕ್ಕಳು ಇದೇ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಕಲಿತವರು. ಕೆಲವು ತಿಂಗಳುಗಳ ಹಿಂದೆ ತಮ್ಮ ಹೆಂಡತಿ ತೀರಿಕೊಂಡರು. ಆದರೆ ಅವರು ಬದುಕಿದ್ದಾಗಲೇ ನನಗೆ ಯಾವಾಗಲೂ ಹೇಳುತ್ತಿದ್ದರು. ನಮ್ಮ ಸ್ಕೂಲಿನ ವಿದ್ಯಾರ್ಥಿಗಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಅಂತ. ಅವರ ಆಸೆಯಂತೆಯೇ ನಮ್ಮ ಕುಟುಂಬದವರೆಲ್ಲರ ಒಮ್ಮತದಿಂದ ಒಪ್ಪಿ ಈ ದಿನ ನಮ್ಮ ಶಾಲೆಯಲ್ಲಿರುವ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ನಮ್ಮ ಕೈಲಾದಷ್ಟು ನಾವು ಕಷ್ಟಪಟ್ಟು ದುಡಿದ ನಮ್ಮ ಸ್ವಂತ ಹಣದಲ್ಲಿ ಸ್ಕೂಲ್ ಬ್ಯಾಗ್ ಮತ್ತು ನೋಟ್ ಬುಕ್ ಕಲಿಕಾ ಸಾಮಗ್ರಿಗಳನ್ನು ವಿತರಿಸುತಿದ್ದೇವೆ ಎಂದರು.

    ಮದುವೆಗೆ ಎರಡು ಮೂರು ಲಕ್ಷ ಖರ್ಚು ಮಾಡಿದರೂ ಸಿಗದ ನೆಮ್ಮದಿ.  ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿದಾಗ ಸಿಕ್ಕಿತು. ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ನಾವು ನುಡಿದಂತೆ ನಡೆಯಬೇಕು. ನಮ್ಮ ಊರಿನ ಗ್ರಾಮಸ್ಥರೆಲ್ಲರೂ ಮನಸ್ಸು ಮಾಡಿದರೆ ನಮ್ಮ ಶಾಲೆಯ ಕಟ್ಟಡವನ್ನು ಹೊಸದಾಗಿ ಕಟ್ಟಬಹುದು ಎಂದು ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

    ಈ ಸಂದರ್ಭದಲ್ಲಿ ಭಾರತೀಯ ಪರಿವರ್ತನಾ ಸಂಘ ತುಮಕೂರು ಜಿಲ್ಲೆ ಮುಖಂಡರು ಆದ ಹೆಚ್. ಕೆಂಚರಾಯ, ಪಾವಗಡ ತಾಲೂಕು ಬಿಪಿಎಸ್ ಸಂಯೋಜಕರು ಆದ ಹೆಚ್.ಡಿ.ಈರಣ್ಣ,  ಕಲಾವಿದರಾದ ನಾಗರಾಜು, ನರಸಿಂಹಮೂರ್ತಿ, ಹರಿಹರಪುರ ಗ್ರಾಮಸ್ಥರು ಹಾಗೂ ಎಸ್ ಡಿಎಂಸಿ ಅಧ್ಯಕ್ಷರು ಸದಸ್ಯರು, ಶಾಲೆಯ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ವರದಿ: ರಾಮಪ್ಪ ಸಿ.ಕೆ.ಪುರ,  ಪಾವಗಡ ತಾಲ್ಲೂಕು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಪಾವಗಡದಲ್ಲಿ ಭೂಮಾಫಿಯಾ ದಂಧೆ: ಗೌಡೆಟಿ ಪ್ರಭಾಕರ್ ಗಂಭೀರ ಆರೋಪ

    May 3, 2026

    ಎಸ್.ಎಸ್.ಎಲ್.ಸಿ. ಫಲಿತಾಂಶ: ಸಹನಾ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

    April 23, 2026

    ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಕೊರತೆ: ಬಡ ರೋಗಿಗಳ ಪರದಾಟ

    April 14, 2026

    Comments are closed.

    Our Picks

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕೊಡಿಗೇನಹಳ್ಳಿ: ಬಸ್‌ ನಿಲ್ದಾಣದಲ್ಲಿ ಬಿದ್ದಿದ್ದ ಚಿನ್ನದ ನೆಕ್ಲೇಸ್‌ ಕದ್ದ ಮಹಿಳೆ ಬಂಧನ

    May 9, 2026

    ಕೊಡಿಗೇನಹಳ್ಳಿ: ಬಸ್‌ ನಿಲ್ದಾಣದಲ್ಲಿ ಕೆಳಗೆ ಬಿದ್ದಿದ್ದ ಚಿನ್ನದ ನೆಕ್ಲೇಸ್‌ ಅನ್ನು ಕಳವು ಮಾಡಿದ್ದ ಮಹಿಳೆಯೊಬ್ಬರನ್ನು ಕೊಡಿಗೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹಿಂದೂಪುರ…

    ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸೇರಿ ನಾಲ್ವರು ಸಾವು

    May 9, 2026

    ಮೇ 12 ರಂದು ಡಾ.ಜಿ.ಎಸ್.ಸಿದ್ದಲಿಂಗಯ್ಯನವರ ಬದುಕು–ಬರಹ ವಿಚಾರ ಸಂಕಿರಣ, ದತ್ತಿ ಪ್ರಶಸ್ತಿ ಸಮಾರಂಭ

    May 9, 2026

    ಸಿರಾ: ಶಿಕ್ಷಕರ ತರಬೇತಿ ಸಂಸ್ಥೆ ದಾಖಲಾತಿ ಪ್ರಾರಂಭ

    May 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.