nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಮೂರ್ಖ ಬಲಿದಾನ: ನೊಂದು ಬೆಂದ ಸನ್ಯಾಸಿಯ ಕಥೆ | ಜೀವನಕ್ಕೊಂದು ಅದ್ಭುತ ಸಂದೇಶ

    February 7, 2026

    ಸೇಂದಿ ಮಾರಾಟಕ್ಕೆ ಅವಕಾಶ ಕೊಡಿ: ಪ್ರಣವಾನಂದ ಸ್ವಾಮೀಜಿ ಒತ್ತಾಯ!

    February 6, 2026
    Facebook Twitter Instagram
    ಟ್ರೆಂಡಿಂಗ್
    • ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!
    • ಮೂರ್ಖ ಬಲಿದಾನ: ನೊಂದು ಬೆಂದ ಸನ್ಯಾಸಿಯ ಕಥೆ | ಜೀವನಕ್ಕೊಂದು ಅದ್ಭುತ ಸಂದೇಶ
    • ಸೇಂದಿ ಮಾರಾಟಕ್ಕೆ ಅವಕಾಶ ಕೊಡಿ: ಪ್ರಣವಾನಂದ ಸ್ವಾಮೀಜಿ ಒತ್ತಾಯ!
    • ಸಂಸ್ಕೃತಿಯನ್ನು ಗೌರವಿಸುವ ಧಾರ್ಮಿಕ ಹಬ್ಬಗಳು ಹೆಚ್ಚು ನಡೆಯಬೇಕು: ಪಿ.ಎನ್‌.ಕೃಷ್ಣಮೂರ್ತಿ
    • ತಿಪಟೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಫೆ.12ರಂದು ಸ್ವಯಂ ಪ್ರೇರಿತ ಬಂದ್, ಮುಷ್ಕರ
    • ಗುಬ್ಬಿ: ವೇಗದಿಂದ ಸಾಗುತ್ತಿದೆ ಕಂದಾಯ ಗ್ರಾಮಗಳ ನೋಂದಣಿ ಕಾರ್ಯ
    • ರಾಜ್ಯದಲ್ಲಿ ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣ ನಿಯಂತ್ರಣಕ್ಕೆ ಎಐ (AI) ತಂತ್ರಾಂಶ ಅಳವಡಿಕೆಗೆ ಸಂಪುಟ ನಿರ್ಧಾರ
    • ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಅಗ್ನಿಗಾಹುತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶ್ರೀಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಯುವಕರಿಗೆ ದಾರಿದೀಪ: ಪ್ರಾಂಶುಪಾಲರಾದ ಡಿ.ಧರೇಂದ್ರಯ್ಯ!
    ಜಿಲ್ಲಾ ಸುದ್ದಿ September 11, 2022

    ಶ್ರೀಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ಯುವಕರಿಗೆ ದಾರಿದೀಪ: ಪ್ರಾಂಶುಪಾಲರಾದ ಡಿ.ಧರೇಂದ್ರಯ್ಯ!

    By adminSeptember 11, 2022No Comments1 Min Read
    narayana guru

    ಹಿರಿಯೂರು: ತಾಲ್ಲೂಕಿನ ತಾಲ್ಲೂಕು ತಹಶೀಲ್ದಾರರಾದ ಪ್ರಶಾಂತ ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವದ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಾಣಿಕಾಲೇಜಿನ ಪ್ರಾಂಶುಪಾಲ  ಡಿ. ಧರೇಂದ್ರಯ್ಯ, ಕೇರಳದ ಸಮಾಜದ ಸಮಾಜಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರು ನಾರಾಯಣ ಗುರುಗಳು ವೈಕಂ ಚಳುವಳಿಯ ಪ್ರತಿಪಾದಕರಾಗಿದ್ದು, ಭೂ ರಹಿತ ರೈತರಿಗೆ ಭೂಚಳುವಳಿಯ ಮೂಲಕ ಭೂಮಿ ಕೊಡಿಸಲು ಹೋರಾಡಿದರು, ನಾರಾಯಣ ಗುರುಗಳ ಮಹಾನ್ ವ್ಯಕ್ತಿಗಳ ಆದರ್ಶಗಳು ಇಂದಿನ ಯುವಕರಿಗೆ ದಾರಿದೀಪವಾಗಿದೆ.  ನಾರಾಯಣ ಗುರುಗಳು ಸಮಾಜದ ಪಿಡುಗುಗಳಾದ ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿಗಳ ತೊಡೆದು ಹಾಕಲು ಹೋರಾಡಿದರು ಎಂದರು.


    Provided by
    Provided by

    ತಹಶೀಲ್ದಾರ್ ಪ್ರಶಾಂತ ಕೆ. ಪಾಟೀಲ ಅವರು ಮಾತನಾಡಿ, ಹಿಂದುಳಿದ ವರ್ಗದವರಿಗೆ ದೇವಸ್ಥಾನ ಪ್ರವೇಶ ದೊರಕಿಸಿ ಕೊಡಲು ಹೋರಾಡಿದ ಅವರು ಮಹಾನ್ ಮಾನವತಾವಾದಿಯಾಗಿದ್ದು, ಅಂತರ್ ಜಾತಿಯ ವಿವಾಹಕ್ಕೆ ಒತ್ತು ನೀಡಿದ ಇವರು ಸರ್ವಜನರಲ್ಲೂ ಭ್ರಾತೃತ್ವವನ್ನು ಬೆಳೆಸಲು ಹೋರಾಡಿದರು, ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿದ ಇವರು  ಸಾಮಾಜಿಕಕ್ರಾಂತಿಯನ್ನೇ ಮಾಡಿದರು ಎಂದರು.

    ನಂತರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಜ್ಜಪ್ಪ ಯಾನೆ ಅಜಯ್ ಕುಮಾರ್ ಅವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು” ಅವರ ಜೀವನ ಚರಿತ್ರೆಯ ಬಗ್ಗೆ ಅರ್ಥಪೂರ್ಣವಾಗಿ ವಿವರಿಸಿದರು.

    ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರರಾದ ಪ್ರಶಾಂತ್ ಪಾಟೀಲ್ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಜ್ಜಪ್ಪ ಯಾನೆ ಅಜಯ್ ಕುಮಾರ್, ಸದಸ್ಯರುಗಳಾದ ಜಗದೀಶ್, ವಿಶಾಲಾಕ್ಷಿ,  ದೈಹಿಕ ಶಿಕ್ಷಣ ಪರಿವೀಕ್ಷಕರಾದ ಮನೋಹರ್, ಕಾರ್ಮಿಕ ಇಲಾಖೆಯ ಅಧಿಕಾರಿಯಾದ ಅಲ್ಲಾ ಭಕ್ಷಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಉಪನೋಂದಣಿ ಅಧಿಕಾರಿ ಕಲಾವತಿ ಜೆ,  ಶಿರಸ್ತೇದಾರ್ ತಿಪ್ಪೇಸ್ವಾಮಿ,  ಶ್ರೀನಿವಾಸ್ ರೆಡ್ಡಿ, ಇತರರು ಉಪಸ್ಥಿತರಿದ್ದರು.

    ವರದಿ: ಮುರುಳಿಧರನ್ ಆರ್. ಚಿತ್ರದುರ್ಗ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

    admin
    • Website

    Related Posts

    ಸರಗೂರು: ಕಾಡಾನೆ ದಾಳಿಗೆ ರೈತ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ತೀವ್ರ ಆಕ್ರೋಶ

    February 5, 2026

    ರಾಚಯ್ಯ ಸಂವಿಧಾನ, ಕೊಡಲಿ ಕಾನೂನು: ಲ್ಯಾಂಡ್‌ ಲಾರ್ಡ್‌ ಸಿನಿಮಾ ಬಗ್ಗೆ ಸಮಾಜ ಸೇವಕ ಮದನ್ ಮ್ಯಾಡಿ

    February 4, 2026

    ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು: ವಿ.ವಿಜಯ ಕುಮಾರ್ ನಾಗನಾಳ

    February 2, 2026

    Comments are closed.

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ನಾಲಂದಾ/ತುಮಕೂರು: ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ಸದಸ್ಯರು ಬಿಹಾರದ ನಾಲಂದಾ ಜಿಲ್ಲೆಯ ರಾಜಗೀರ್‌ನಲ್ಲಿರುವ ಧರ್ಮಶಾಲೆಯೊಂದರಲ್ಲಿ…

    ಮೂರ್ಖ ಬಲಿದಾನ: ನೊಂದು ಬೆಂದ ಸನ್ಯಾಸಿಯ ಕಥೆ | ಜೀವನಕ್ಕೊಂದು ಅದ್ಭುತ ಸಂದೇಶ

    February 7, 2026

    ಸೇಂದಿ ಮಾರಾಟಕ್ಕೆ ಅವಕಾಶ ಕೊಡಿ: ಪ್ರಣವಾನಂದ ಸ್ವಾಮೀಜಿ ಒತ್ತಾಯ!

    February 6, 2026

    ಸಂಸ್ಕೃತಿಯನ್ನು ಗೌರವಿಸುವ ಧಾರ್ಮಿಕ ಹಬ್ಬಗಳು ಹೆಚ್ಚು ನಡೆಯಬೇಕು: ಪಿ.ಎನ್‌.ಕೃಷ್ಣಮೂರ್ತಿ

    February 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.