nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎನ್‌ ಎಂಎಂಎಸ್‌ ಆ್ಯಪ್‌ ಅಪ್‌ ಡೇಟ್‌ ಕಿರಿಕಿರಿ: ಬೀದರ್‌ ನಲ್ಲಿ ಹೈರಾಣಾದ ಕೂಲಿ ಕಾರ್ಮಿಕರು

    September 23, 2026

    ಬೀದರ್: ಹೊಲದಲ್ಲಿ 1.5 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪಿಯ ಬಂಧನ

    September 23, 2026

    ಬೀದರ್: ನಿವೃತ್ತ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ್ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತರ ದಾಳಿ

    September 23, 2026
    Facebook Twitter Instagram
    ಟ್ರೆಂಡಿಂಗ್
    • ಎನ್‌ ಎಂಎಂಎಸ್‌ ಆ್ಯಪ್‌ ಅಪ್‌ ಡೇಟ್‌ ಕಿರಿಕಿರಿ: ಬೀದರ್‌ ನಲ್ಲಿ ಹೈರಾಣಾದ ಕೂಲಿ ಕಾರ್ಮಿಕರು
    • ಬೀದರ್: ಹೊಲದಲ್ಲಿ 1.5 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪಿಯ ಬಂಧನ
    • ಬೀದರ್: ನಿವೃತ್ತ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ್ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತರ ದಾಳಿ
    • ರಾಜ್ಯದಲ್ಲಿ ಬರ ಘೋಷಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ: ಮೂರನೇ ಹಂತದಲ್ಲಿ 53 ಹೊಸ ತಾಲೂಕುಗಳು ಸೇರ್ಪಡೆ!
    • ಹೊಳೆನರಸೀಪುರ: ಕುಪ್ಪೆ ಗ್ರಾಮದಲ್ಲಿ ಕತ್ತಲೆಯಲ್ಲಿ ಮುಳುಗಿದ ಪ್ರಮುಖ ವೃತ್ತಗಳು; 35 ದಿನ ಕಳೆದರೂ ಕಣ್ಣುಮುಚ್ಚಿ ಕುಳಿತ ಪಿಡಿಒಗಳು!
    • ಹೊಳೆನರಸೀಪುರ: ತಾತನಹಳ್ಳಿ ಡೈರಿ ಅವ್ಯವಸ್ಥೆ – ಸಾವಿರಾರು ಲೀಟರ್ ಹಾಲು ಹಾಳು, ರೈತರಿಂದ ಆಕ್ರೋಶಭರಿತ ಪ್ರತಿಭಟನೆ
    • ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್
    • ತೋಟದಲ್ಲಿ ಗಾಂಜಾ ಬೆಳೆದ ಪೊಲೀಸಪ್ಪನ ಪುತ್ರ: 950 ಗ್ರಾಂ ಸೊಪ್ಪು ವಶಕ್ಕೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ದಲಿತ ನೌಕರೆ ತಂದ ಚಾ ತಿಂಡಿ ತಿನ್ನಲ್ಲ:  ಗ್ರಾ.ಪಂ. ಸದಸ್ಯೆ ವಿರುದ್ಧ ಜಾತಿ ನಿಂದನೆ ಆರೋಪ
    ಪಾವಗಡ September 20, 2022

    ದಲಿತ ನೌಕರೆ ತಂದ ಚಾ ತಿಂಡಿ ತಿನ್ನಲ್ಲ:  ಗ್ರಾ.ಪಂ. ಸದಸ್ಯೆ ವಿರುದ್ಧ ಜಾತಿ ನಿಂದನೆ ಆರೋಪ

    By adminSeptember 20, 2022No Comments2 Mins Read
    ck pura

    ಪಾವಗಡ: ದಲಿತ ನೌಕರೆ ತಂದ ತಿಂಡಿ, ಚಾ ಕಾಫಿ ಇವರ ಗಂಟಲಲ್ಲಿ ಇಳಿಯಲ್ವಂತೆ? ನೀನು ಚಾ ತಿಂಡಿ ತಂದ್ರೆ, ನಾನು ತಿನ್ನಲ್ಲ ಎಂದು ಜಾತಿಯ ಹೆಸರೆತ್ತಿ ದಲಿತ ನೌಕರರೊಬ್ಬರನ್ನು  ಗ್ರಾಮ ಪಂಚಾಯತ್ನ ಸದಸ್ಯೆ ನಿಂದಿಸಿರುವ ಘಟನೆ ತಾಲೂಕು ನಿಡಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

    ಹರಿಹರಪುರ  ಸದಸ್ಯೆ ಅರುಂಧತಿ ನಾಗಲಿಂಗಪ್ಪ ಅವರ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಗ್ರಾಮ ಪಂಚಾಯತ್ ಸಭೆಗಳು ನಡೆದಾಗ ನೌಕರೆ ದಲಿತ ಹೆಣ್ಣು ಮಗಳಾದ ಧಾಮಸ ಅವರು, ಹೊಟೇಲ್ ನಿಂದ ತಿಂಡಿ ತಂದು ಕೊಟ್ಟಾಗ ನೀನು ತಂದ ಊಟ ತಿಂಡಿಯನ್ನು ನಾವು ತಿನ್ನುವುದಿಲ್ಲ, ಎಂದು ಜಾತಿಯ ಹೆಸರೆತ್ತಿ ಅವಮಾನಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದೇ ಅಲ್ಲದೇ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂಬ ಆಕ್ರೋಶ ಕೇಳಿ ಬಂದಿದೆ.

    ಘಟನೆಯ ಹಿನ್ನೆಲೆ:

    ತಾಲೂಕು ನಿಡಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ಮಾರಣ್ಣ ಎಂಬುವವರು 15 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ನೇಮಕ ಮಾಡಿಕೊಂಡಿದ್ದರು. ಮಾರಣ್ಣ ಎಂಬವರು ಕಂಬ ಹತ್ತಿ ಲೈಟ್ ಹಾಕುವ ಈಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ದಾರುಣವಾಗಿ ಮೃತಪಟ್ಟಿದ್ದರು. ಹೀಗಾಗಿ ಅವರ ಬಡ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಲಾಯಿತು. ಮಾರಪ್ಪನವರ ಪತ್ನಿ ಜಯಮ್ಮನವರು ಮಾರಪ್ಪನವರ ಕೆಲಸವನ್ನು ನಿರ್ವಹಿಸಲು ಆರಂಭಿಸಿದ್ದರು.  ಎರಡು ವರ್ಷಗಳ ಹಿಂದೆ ಜಯಮ್ಮನವರಿಗೆ ಅನಾರೋಗ್ಯವಾಗಿದ್ದರಿಂದಾಗಿ ಅವರ ಮಗಳಾದ ದಾಮಸ ಅವರು ಪಂಚಾಯತ್ ಅಧ್ಯಕ್ಷರು, ಗ್ರಾಮಸ್ಥರ ಒಪ್ಪಿಗೆಯಿಂದಲೇ ಜಯಮ್ಮನವರ ಕೆಲಸವನ್ನು ಮಾಡುತ್ತಿದ್ದಾರೆ.

    ಗ್ರಾಮ ಪಂಚಾಯತ್ ಸಭೆ ನಡೆದಾಗ ದಾಮಸ ಅವರು ಸದಸ್ಯರಿಗೆ ಹೊಟೇಲ್ ನಿಂದ ತಿಂಡಿ ಮತ್ತು ಕಾಫಿ, ಊಟ ತರುತ್ತಿದ್ದರು. ಆದರೆ ಅರುಂಧತಿ ನಾಗಲಿಂಗಪ್ಪ ಅವರು ಧಾಮಸ ಅವರಿಗೆ ಜಾತಿ ನಿಂದನೆ ಮಾಡಿ, ಮನಸ್ಸಿಗೆ ಆಘಾತವನ್ನುಂಟು ಮಾಡಿದ್ದಾರೆ. ಜಾತಿಯ ಬೇಧವನ್ನು ತಲೆಯಲ್ಲಿ ತುಂಬಿಕೊಂಡವರು, ಅಸ್ಪೃಶ್ಯತೆಯನ್ನು ಪ್ರತಿಪಾದಿಸುವವರು ಸದಸ್ಯರಾಗಿದ್ದು, ಸಂವಿಧಾನದ ವಿರುದ್ಧ ಮನಸ್ಥಿತಿಯವರು ಸದಸ್ಯರಾಗಲು ಅನರ್ಹರು ಅವರ ಸದಸ್ಯತ್ವ ರದ್ದುಪಡಿಸಬೇಕು ಎಂಬ ಆಕ್ರೋಶ ಕೇಳಿ ಬಂದಿದೆ.

    ಘಟನೆ ಸಂಬಂಧ ಡಿ. ಎಸ್. ಎಸ್. ಸಂಚಾಲಕರಾದ ಹನುಮಂತರಾಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಜಾತಿ ನಿಂದನೆ ಮಾಡಿದವರ ಮೇಲೆಕಾನೂನು ಕ್ರಮ ಕೈಗೊಳ್ಳಬೇಕು. ಅಂಥವರ ಸದಸ್ಯತ್ವವನ್ನು ರದ್ದು ಮಾಡಬೇಕು. ಸಂಬಂಧಪಟ್ಟ ಮೇಲಾಧಿಕಾರಿಗಳು ಇದನ್ನು ಸೂಕ್ಷ್ಮ ವಾಗಿ ಪರಿಶೀಲನೆ ಮಾಡಿ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

    ವರದಿ: ರಾಮಪ್ಪ ಸಿ.ಕೆ.ಪುರ ಪಾವಗಡ ತಾಲೂಕು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಕಿಲಾರ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ರಾಮಚಂದ್ರ ಹೆಚ್. ಅವಿರೋಧ ಆಯ್ಕೆ

    September 19, 2026

    ಬರದ ತೀವ್ರತೆ: ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಲಿ: ಕುರಿಮಲ್ಲಪ್ಪ ಆಗ್ರಹ

    September 17, 2026

    ನಿಡಗಲ್ಲು ಉತ್ಸವಕ್ಕೆ ಅದ್ದೂರಿ ಚಾಲನೆ: ದುರ್ಗವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಒತ್ತಾಯ

    September 8, 2026

    Comments are closed.

    Our Picks

    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಹಿರಿಯ ನಟ ಅನಂತ್ ನಾಗ್

    September 23, 2026

    ಗಣೇಶೋತ್ಸವ ಅನ್ನದಾನದ ವೇಳೆ ಕುದಿಯುತ್ತಿದ್ದ ಸಾಂಬಾರ್‌ ಪಾತ್ರೆಗೆ ಬಿದ್ದು ಮಹಿಳೆ ದಾರುಣ ಸಾವು

    September 22, 2026

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಎನ್‌ ಎಂಎಂಎಸ್‌ ಆ್ಯಪ್‌ ಅಪ್‌ ಡೇಟ್‌ ಕಿರಿಕಿರಿ: ಬೀದರ್‌ ನಲ್ಲಿ ಹೈರಾಣಾದ ಕೂಲಿ ಕಾರ್ಮಿಕರು

    September 23, 2026

    ಔರಾದ್‌/ಬೀದರ್ : ಗ್ರಾಮೀಣ ಪ್ರದೇಶಗಳಲ್ಲಿ ವಿಬಿ–ಜಿ ರಾಮ್‌ ಜಿ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಎನ್‌ ಎಂಎಂಎಸ್‌ (NMMS)…

    ಬೀದರ್: ಹೊಲದಲ್ಲಿ 1.5 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆದಿದ್ದ ಆರೋಪಿಯ ಬಂಧನ

    September 23, 2026

    ಬೀದರ್: ನಿವೃತ್ತ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ್ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತರ ದಾಳಿ

    September 23, 2026

    ರಾಜ್ಯದಲ್ಲಿ ಬರ ಘೋಷಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ: ಮೂರನೇ ಹಂತದಲ್ಲಿ 53 ಹೊಸ ತಾಲೂಕುಗಳು ಸೇರ್ಪಡೆ!

    September 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.