nammatumakuru

    Subscribe to Updates

    Get the latest creative news from FooBar about art, design and business.

    What's Hot

    ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ

    April 10, 2026

    ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ: ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು

    April 9, 2026

    ತುಮಕೂರು: ಹಣದ ವಿಚಾರಕ್ಕೆ ತಂದೆಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ

    April 9, 2026
    Facebook Twitter Instagram
    ಟ್ರೆಂಡಿಂಗ್
    • ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ
    • ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ: ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು
    • ತುಮಕೂರು: ಹಣದ ವಿಚಾರಕ್ಕೆ ತಂದೆಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ
    • ಶಿರಾದ ಹೊನ್ನೇನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ; ಕೊಳವೆಬಾವಿ ಕೊರೆಯುವ ವಾಹನ ತಡೆದು ಆಕ್ರೋಶ
    • ಪಾವಗಡ: ರಾಮಕೃಷ್ಣ ಸೇವಾಶ್ರಮದಿಂದ ಮೇವು ವಿತರಣೆ
    • ಕುಣಿಗಲ್: ದಲಿತ ಮುಖಂಡರುಗಳೊಂದಿಗೆ ಕುಂದುಕೊರತೆ ಸಭೆ
    • ಶಿರಾದ ಸಪ್ತಗಿರಿ ಬಡಾವಣೆಯಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬ: ಕೂಡಲೇ ಬದಲಿಸಲು ಸಾರ್ವಜನಿಕರ ಒತ್ತಾಯ
    • ತಿಪಟೂರಿನ ಎಚ್.ಬೈರಾಪುರದಲ್ಲಿ ಕರಿಯಮ್ಮ, ಪ್ಲೇಗಿನಮ್ಮ ದೇವಿ ಜಾತ್ರೆ: ವಿಜೃಂಭಣೆಯ ರಥೋತ್ಸವಕ್ಕೆ ತೆರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕುಡುಕರ ತಾಣವಾದ ಬಂಡೆಗಳು: ರಾಗಿ ಕಣದಲ್ಲಿ ಮದ್ಯದ ಬಾಟಲ್!
    ಕೊರಟಗೆರೆ October 9, 2022

    ಕುಡುಕರ ತಾಣವಾದ ಬಂಡೆಗಳು: ರಾಗಿ ಕಣದಲ್ಲಿ ಮದ್ಯದ ಬಾಟಲ್!

    By adminOctober 9, 2022No Comments1 Min Read
    ragi kana bande

    ಕೊರಟಗೆರೆ: ನೈಸರ್ಗಿಕ ಬಂಡೆಗಳ ಮೇಲೆ ನೂರಾರು ವರ್ಷಗಳಿಂದ ಕೃಷಿ ಉತ್ಪನ್ನಗಳನ್ನು ಶುಚಿ ಮಾಡುತ್ತಿದ್ದ ರೈತರಿಗೆ ಕಳೆದ ಮೂರು ವರ್ಷಗಳಿಂದ ಮದ್ಯದ ಬಾಟಲ್ ನ ಚೂರುಗಳನ್ನು ಸ್ವಚ್ಚಗೊಳಿಸುವುದೇ ತಲೆ ನೋವಾಗಿದೆ.

    ಕೃಷಿಕರು ತಾವು ಬೆಳೆದ ರಾಗಿ,ತೊಗರಿ,ಜೋಳ ಸೇರಿದಂತೆ ಆಹಾರ ಬೆಳೆಗಳನ್ನು ನೈಸರ್ಗಿಕ ಬಂಡೆಯ ಮೇಲೆ ಶುಚಿ ಮಾಡುತ್ತಿದ್ದರು. ಜಮೀನುಗಳಲ್ಲಿ ಕಣ ಸಿದ್ಧ ಮಾಡುವ ಸಂಪ್ರದಾಯ ಕೈಬಿಟ್ಟ ನಂತರ ಮತ್ತು ರಸ್ತೆ ಮೇಲೆ ಸಂಸ್ಕರಣೆ ಮಾಡಿದರೆ ಶುಚಿಯಾಗಿರುವುದಿಲ್ಲ ಎಂದು ಬಂಡೆಗಳನ್ನೇ ರೈತರು ಅಶ್ರಯಿಸಿದ್ದರು. ಅನಂತರ ಬಂಡೆಗಳ ಮೇಲೆ ಜಾಗ ಕಾಯ್ದಿರಿಸಲು ಕೃಷಿಕರಲ್ಲಿ ಪೈಪೋಟಿ ಪ್ರಾರಂಭವಾಗಿತ್ತು.


    Provided by
    Provided by

    ತೋವಿನಕೆರೆ ಸಮೀಪ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಂಡೆಹಳ್ಳಿ ತಿರುವಿನಲ್ಲಿರುವ ಬಂಡೆ ಮೇಲೆ ರಾಗಿ ತೆನೆಗಳನ್ನು ರಾಶಿ ಹಾಕಿ ಶುಚಿ ಮಾಡಲಾಗುತ್ತಿದೆ.


    ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಂಡೆಹಳ್ಳಿ ಆಲದ ಮರದ ಬಂಡೆ, ಮಲ್ಲಪುಡಿ ಬಂಡೆ, ಓಣಿ ಬಂಡೆ, ಜುಂಜರಾಮನಹಳ್ಳಿ ಬಂಡೆ, ಹೊಲತಾಳುವಿನ ಸೀಬಯ್ಯನ ಬಂಡೆ,ಗೊಲ್ಲರ ಹಟ್ಟಿ ಬಂಡೆ, ನವನಗರ ಬಂಡೆ, ಬಿಕ್ಕೆಗುಟ್ಟೆ ಬಂಡೆಗಳ ಮೇಲೆ ಹಲವು ಟನ್ ಗಳಷ್ಟು ರಾಗಿ, ಮೆಕ್ಕೆಜೋಳ, ಭತ್ತ ಶುದ್ದವಾಗುತ್ತಿತ್ತು ಎನ್ನುತ್ತಾರೆ ರೈತರು.

    ಬಂಡೆಗಳ ಮೇಲೆ ಶುಚಿ ಮಾಡಿದ ರಾಗಿಗೆ ಹೆಚ್ಚಿನ ಬೇಡಿಕೆ ಇದ್ದು. ಸ್ಥಳದಲ್ಲಿಯೇ ಹಲವು ಕ್ವಿಂಟಾಲ್ ರಾಗಿ ಮಾರಾಟವಾಗುತ್ತಿತ್ತು. ಕಳೆದ ವರ್ಷ ರಾಗಿ ಕಟಾವು ಮಾಡುವಾಗ ಹೆಚ್ಚು ಮಳೆ ಬಂದು ರಾಗಿ ತೆನೆ ಹಾಳಾಗಿತ್ತು. ಖಾಲಿ ಇದ್ದ ಬಂಡೆಗಳು ಮದ್ಯವ್ಯಸನಿಗಳ ಕುಡಿಯುವ ತಾಣವಾಗಿತ್ತು. ಬಾಟಲ್ ಗಳನ್ನು ಒಡೆದು ಚೂರು ಮಾಡುತ್ತಿದ್ದರು ಎನ್ನುವುದು ಸ್ಥಳೀಯರ ದೂರಾಗಿದೆ.

    ತೋವಿನಕೆರೆ ಸಮೀಪದ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಂಡೆಹಳ್ಳಿ ತಿರುವುನಲ್ಲಿ ರಾಗಿ ಶುಚಿ ಮಾಡುತ್ತಿದ್ದ ಬಂಡೆ ಮೇಲೆ ಮದ್ಯದ ಬಾಟಲ್ ಮತ್ತು ಚೂರುಗಳನ್ನು ಹಾಕಲಾಗಿದೆ.


    ಬಂಡೆಗಳು ಕುಡುಕರ ತಾಣವಾದ ನಂತರ ಶುಚಿ ಮಾಡಿದಾಗ ರಾಗಿಯ ಜೊತೆ ಗಾಜಿನ ಚೂರು ಸೇರಿ ಕೊಳ್ಳುತ್ತಿವೆ. ಇಂತಹ ರಾಗಿಯಿಂದ ಮಾಡಿದ ಆಹಾರ ಸೇವಿಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ರೈತರು.

    ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಏ.15ರ ನಂತರ ಮನೆ ಮನೆಗೆ ಜನ ಗಣತಿ ಕಾರ್ಯಕರ್ತರು ಭೇಟಿ | ನಾಗರಿಕರು ಸ್ವಯಂ ಗಣತಿಯಲ್ಲಿ ಭಾಗವಹಿಸಿ: ತಹಶೀಲ್ದಾರ್ ಮಂಜುನಾಥ್ ಕೆ. ಕರೆ

    April 6, 2026

    ಕೊರಟಗೆರೆ: ಜನವಸತಿ ಪ್ರದೇಶದಲ್ಲಿ ಕರಡಿ ಪ್ರತ್ಯಕ್ಷ: ಪಟ್ಟಣದ ಜನತೆಯಲ್ಲಿ ಹೆಚ್ಚಿದ ಆತಂಕ

    April 6, 2026

    ಕೊರಟಗೆರೆ: ಪರವಾನಗಿ ಭೂಮಾಪಕರ ಭದ್ರತೆ ಮತ್ತು ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

    March 31, 2026

    Comments are closed.

    Our Picks

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ

    April 10, 2026

    ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಫಲಿತಾಂಶದಲ್ಲಿ…

    ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ: ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶಗಳು

    April 9, 2026

    ತುಮಕೂರು: ಹಣದ ವಿಚಾರಕ್ಕೆ ತಂದೆಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ

    April 9, 2026

    ಶಿರಾದ ಹೊನ್ನೇನಹಳ್ಳಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ; ಕೊಳವೆಬಾವಿ ಕೊರೆಯುವ ವಾಹನ ತಡೆದು ಆಕ್ರೋಶ

    April 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.