ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ(KMF) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸುವುದರ ಮೂಲಕ ಅಭ್ಯರ್ಥಿಗಳಿಗೆ ಸಿಹಿಸುದ್ದಿ ನೀಡಿದೆ.
ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಹುದ್ದೆಗಳು ಖಾಲಿ ಇದ್ದು194 ಟೆಕ್ನಿಷಿಯನ್, ಕೆಮಿಸ್ಟ್, ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ನೇಮಕಾತಿ ಅಧಿಸೂಚನೆ ಪ್ರಕಾರ ಮಾರ್ಚ್ 3, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ)- 17, ಸಹಾಯಕ ವ್ಯವಸ್ಥಾಪಕರು (ಆಡಳಿತ)- 1, ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್)- 3, ಎಂಐಎಸ್ /ಸಿಸ್ಟಂ ಆಫೀಸರ್- 1, ಮಾರುಕಟ್ಟೆ ಅಧಿಕಾರಿ- 2, ತಾಂತ್ರಿಕ ಅಧಿಕಾರಿ(ಅಭಿಯಂತರ)-2, ತಾಂತ್ರಿಕ ಅಧಿಕಾರಿ(ಗುಣನಿಯಂತ್ರಣ)- 2, ತಾಂತ್ರಿಕ ಅಧಿಕಾರಿ(ಡಿಟಿ)- 14,ಕೆಮಿಸ್ಟ್ (ದರ್ಜೆ 1)- 4,ವಿಸ್ತರಣಾಧಿಕಾರಿ (ದರ್ಜೆ 3)- 17, ಆಡಳಿತ ಸಹಾಯಕ (ದರ್ಜೆ 2)- 17, ಲೆಕ್ಕ ಸಹಾಯಕ (ದರ್ಜೆ 2)- 12, ಮಾರುಕಟ್ಟೆ ಸಹಾಯಕ (ದರ್ಜೆ 2)- 10, ಕೆಮಿಸ್ಟ್ (ದರ್ಜೆ 2)- 28, ಕಿರಿಯ ಸಿಸ್ಟಂ ಆಪರೇಟರ್- 13, ಶೀಘ್ರಲಿಪಿಗಾರರು (ದರ್ಜೆ 2)-1, ಕಿರಿಯ ತಾಂತ್ರಿಕರು- 50 ಸೇರಿದಂತೆ ಒಟ್ಟು – 194 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಅಭ್ಯರ್ಥಿಗಳು KMF ಅಧಿಕೃತ ವೆಬ್ ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy