ರಾಯಚೂರು: ಹೊಸದಾಗಿ ಮದುವೆಯಾಗಿ ಸುಂದರ ಜೀವನ ನಡೆಸಬೇಕಿದ್ದ ಜೋಡಿಯ ನಡುವೆ ಅನುಮಾನ ವಿಪರೀತಕ್ಕೆ ಹೋಗಿದ್ದು ಪತಿ ಪತ್ನಿಯನ್ನೆ ಕೊಲೆಗೈದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸಾದಪುರದಲ್ಲಿ ನಡೆದಿದೆ.
ಮಮತಾ ಅಲಿಯಾಸ್ ಮಮತಾ ಹಾಗೂ ನಾಗರಾಜ್ ಮಾನ್ವಿ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು ಇಟ್ಟಿಗೆ ತಯಾರಿಕಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ನಾಗರಾಜ್ ಗೆ ಪತ್ನಿ ಮಮತಾ ಮೇಲೆ ಅನುಮಾನ ವಿಪರೀತಕ್ಕೆ ಹೋಗಿ ಈಗ ಹೆಂಡತಿಯನ್ನೇ ಕೊಲೆಗೈದಿದ್ದಾನೆ. ಮಾನ್ವಿ ಪೊಲೀಸರು ಆರೋಪಿ ನಾಗರಾಜ್ ನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯ ವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


