nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿರತೆಯಿಂದ ಅತ್ತೆಯನ್ನು ರಕ್ಷಿಸಿದ ಸೊಸೆ ಸುಜಾತಾಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ

    April 19, 2026

    ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!

    April 19, 2026

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026
    Facebook Twitter Instagram
    ಟ್ರೆಂಡಿಂಗ್
    • ಚಿರತೆಯಿಂದ ಅತ್ತೆಯನ್ನು ರಕ್ಷಿಸಿದ ಸೊಸೆ ಸುಜಾತಾಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ
    • ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!
    • ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ
    • ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ
    • ವಿದ್ಯಾವಂತರಲ್ಲೇ ಹೆಚ್ಚುತ್ತಿರುವ ಜಾತಿ ಪ್ರಜ್ಞೆ: ಲೇಖಕಿ ಎಂ.ಸಿ.ಲಲಿತ ವಿಷಾದ
    • ತಿಪಟೂರು: ಬೆಡ್‌ ಶೀಟ್ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ; ಪಕ್ಕದ ಪೊರಕೆ ತಯಾರಿಕಾ ಘಟಕಕ್ಕೂ ಬೆಂಕಿ ಕೆನ್ನಾಲಿಗೆ
    • ಅವೈಜ್ಞಾನಿಕ ಅಂಡರ್‌ ಪಾಸ್; ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಜಯಂತಿ ಗ್ರಾಮಸ್ಥರಿಂದ ಧರಣಿ
    • ಸಿಂಗಾಪುರ ಗ್ರಾಮಕ್ಕೆ ಸರ್ಕಾರಿ ಬಸ್‌ ಸೌಲಭ್ಯ ಕಲ್ಪಿಸಲು ಮಹಿಳೆಯರ ಆಗ್ರಹ: ಕೆಎಸ್‌ ಆರ್‌ ಟಿಸಿ ಅಧಿಕಾರಿಗೆ ಮನವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಿಕ್ಷಕರ ನಿದ್ದೆಗೆಡಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ
    ಕೊರಟಗೆರೆ February 27, 2023

    ಶಿಕ್ಷಕರ ನಿದ್ದೆಗೆಡಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ

    By adminFebruary 27, 2023No Comments2 Mins Read
    koratagere

    ಕೊರಟಗೆರೆ: ಕೊರಟಗೆರೆ ತಾಲೂಕಿನಲ್ಲಿ ಇತ್ತೀಚಿಗೆ ನೂತನವಾಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಟರಾಜ್ ಹಲವು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಶಿಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ.

    ತಾಲೂಕಿನಲ್ಲಿ ಇತ್ತೀಚೆಗೆ ಅನಿರೀಕ್ಷಿತ ಭೇಟಿ ಕೊಡುತ್ತಿರುವ ಬಿಇಒ ನಟರಾಜ್ ಇಂದು ಯಾವ ಶಾಲೆಗೆ ಬರಲಿದ್ದಾರೆ ಎಂದು ಶಿಕ್ಷಕರಿಗೆ ನಡುಕ ಹುಟ್ಟುತ್ತಿದೆ, ಯಾವುದೇ ಮಾಹಿತಿ ಇಲ್ಲದೆ ಬೆಳ್ಳಂಬೆಳ್ಳಗೆ ಶಿಕ್ಷಕರು ಶಾಲೆಗೆ ಬರುವ ಮುಂಚೆಯೇ ಶಾಲೆಯ ಮುಂದೆ ಹಾಜರಾಗುವ ಬಿಇಓ ನಟರಾಜ್ ಶಾಲೆಯ ಪೂರ್ಣ ವಾತಾವರಣವನ್ನು ಕಲೆಹಾಕಿ ಶಿಕ್ಷಕರಿಗೆ ಖಡಕ್ ಎಚ್ಚರಿಕೆ ನೀಡಲು , ಸರ್ಪ್ರೈಸ್ ವಿಸಿಟ್ ನೀಡುವ ಮೂಲಕ ತಾಲೂಕಿನಲ್ಲಿ ಮಿಂಚಿನ ಸಂಚಲನವನ್ನೇ ಮೂಡಿಸಿದ್ದಾರೆ.


    Provided by
    Provided by

    ಬಿಇಒ ನಟರಾಜ್ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಬದಲಾವಣೆ ತರಲು ಒಂದು ವಿಶಿಷ್ಟ ರೀತಿಯಲ್ಲಿ ಪ್ರಯೋಗ ಮಾಡುತ್ತಿದ್ದು, ಕೊರಟಗೆರೆ ತಾಲೂಕಿನಲ್ಲಿ ಹಲವು ಶಾಲೆಗಳಿಗೆ ಇತ್ತೀಚಿಗೆ ಸರ್ಪ್ರೈಸ್ ವಿಸಿಟ್ ನೀಡುವ ಮೂಲಕ ನಿಗದಿತ ಸಮಯಕ್ಕೆ ಹಾಜರಾಗದ ಶಿಕ್ಷಕರುಗಳಿಗೆ ಶಾಕ್ ನೀಡಿದ್ದು, ಜೊತೆಗೆ ಶಾಲೆಯನ್ನು ಮುಕ್ತಾಯ ಸಮಯಕ್ಕಿಂತ ಮುಂಚೆ ಹೊರಹೋಗುವ ಶಿಕ್ಷಕರಿಗೂ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಇತ್ತೀಚೆಗೆ ಕೊರಟಗೆರೆ ತಾಲೂಕಿನ ಅಗ್ರಹಾರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಪ್ರೌಢಶಾಲೆಗೆ ಶಾಲೆಯ ಬೆಲ್ ಹೊಡೆಯುವುದಕ್ಕಿಂತ ಮುಂಚೆಯೇ ಶಾಲೆಯ ಮುಂದೆ ಪ್ರತ್ಯಕ್ಷರಾಗಿದ್ದಾರೆ, ಇನ್ನು ಹಲವು ಶಿಕ್ಷಕರು ಶಾಲೆಗೆ ಆಗಮಿಸುವ ಮುಂಚೆ ಶಾಲೆಯ ಕೊಠಡಿಯಲ್ಲಿ ಕುಳಿತು, ಶಾಲೆಯ ವಾತಾವರಣವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಲ್ಲದೆ, ತಾವೇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಕರಂತೆ ಚಾಕ್ ಪೀಸ್ ಹಿಡಿದು ಅರ್ಧ ತಾಸಿಗೂ ಹೆಚ್ಚು ಕಾಲ ಪಾಠ ಪ್ರವಚನದ ಜೊತೆಗೆ ಶಿಸ್ತು ಬದ್ಧ ಜೀವನ, ಮುಂದಿನ ಕೆಲವೇ ದಿನಗಳಲ್ಲಿ ಬರಲಿರುವ ಪರೀಕ್ಷೆಯಲ್ಲಿ ಯಾವ ರೀತಿ ವಿದ್ಯಾರ್ಥಿಗಳು ಯಶಸ್ವಿಯಾಗಿ ಎದುರಿಸಬೇಕು ಎಂಬುದನ್ನು ಹೇಳಿ ಹುರಿದುಂಬಿಸಿದರು.

    ನಂತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಶಾಲಾ ಪ್ರಾರ್ಥನೆಯಲ್ಲಿ ಭಾಗವಹಿಸಿ ಪ್ರೌಢಶಾಲಾ ಮಕ್ಕಳಿಗೆ ಪ್ರಾರ್ಥನಾ ಸಂದರ್ಭದಲ್ಲಿಯೇ ವಿದ್ಯಾರ್ಥಿ ಜೀವನದ ಮೌಲ್ಯವನ್ನು, ಶಿಸ್ತು ಬದ್ಧ ಜೀವನವನ್ನು ರೂಪಿಸಿಕೊಳ್ಳಲು ನೀತಿ ಪಾಠ ಹೇಳಿದರು,

    ನಂತರ ಶಿಕ್ಷಕರುಗಳಿಗೆ 5 ನಿಮಿಷಗಳ ಕಾಲ ಪ್ರತ್ಯೇಕವಾಗಿ ಮೀಟಿಂಗ್ ನಡೆಸಿ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರಬೇಕು, ಶಾಲೆಯ ವಾತಾವರಣವನ್ನು ತುಂಬಾ ವ್ಯವಸ್ಥಿತವಾಗಿ ನಿರ್ವಹಿಸಲು ಕಿವಿ ಮಾತು ಹೇಳಿದ್ದಲ್ಲದೆ ಯಾವುದೇ ಲೋಪ ಅಥವಾ ಆರೋಪಗಳು ಕೇಳಿ ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ಶಿಕ್ಷಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಕೊರಟಗೆರೆ: ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ

    April 13, 2026

    ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಕಾರು, ಬೈಕ್ ಗಳು ಸುಟ್ಟು ಭಸ್ಮ

    April 12, 2026

    ಎನ್‌ ಎಸ್‌ ಎಸ್ ವಿದ್ಯಾರ್ಥಿಗಳು ನಾಯಕತ್ವ ಮನೋಭಾವ ಬೆಳೆಸಿಕೊಳ್ಳಿ: ಈರಪ್ಪ ನಾಯಕ

    April 12, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಚಿರತೆಯಿಂದ ಅತ್ತೆಯನ್ನು ರಕ್ಷಿಸಿದ ಸೊಸೆ ಸುಜಾತಾಗೆ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ

    April 19, 2026

    ಮೈಸೂರು: ಇಲ್ಲಿನ ಸಿದ್ಧಾರ್ಥನಗರದಲ್ಲಿ ನಡೆದ ರೋಚಕ ಘಟನೆಯೊಂದರಲ್ಲಿ, ಮನೆಯೊಳಗೆ ನುಗ್ಗಿದ್ದ ಚಿರತೆಯಿಂದ ತನ್ನ ಅತ್ತೆಯನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ…

    ಜನಗಣತಿ ಆ್ಯಪ್ ತಲೆನೋವು: ತುಮಕೂರಿನಲ್ಲಿ ಶಿಕ್ಷಕರ ಹೈರಾಣು!

    April 19, 2026

    ಏ.20ರಂದು ಶ್ರೀಜಗಜ್ಯೋತಿ ಬಸವೇಶ್ವರರ ಜಯಂತಿ

    April 19, 2026

    ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆ ಅನುಮತಿ: ಕಾಮಗಾರಿ ವೇಗ, ಅಧಿಕಾರಿಗಳಿಗೆ ಅಭಿನಂದನೆ

    April 19, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.