ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮರಿ ಮೊಮ್ಮಗರಾದ ರಾಜರತ್ನ ಅಂಬೇಡ್ಕರ್ ರಾಷ್ಟ್ರೀಯ ಅಧ್ಯಕ್ಷರು, ಭಾರತೀಯ ಬೌದ್ಧ ಮಹಾಸಭಾ ಕಾರ್ಯದರ್ಶಿಗಳು, ಫಿಲೋಫಿಪ್ ಆಫ್ ಭೌದ್ಧಿಸ್ಟ್ ವಿವಿಧ ಸಾಮಾಜಿಕ ಸಂಘಟನೆಗಳ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಯುವಜನತೆಯ ಒಂದು ವಿಚಾರ ಸಂಕೀರ್ಣ ದಲ್ಲಿ ಭಾಗವಹಿಸಲು ಬಂದಿದ್ದ ರಾಜರತ್ನ ಅಂಬೇಡ್ಕರ್ ಅವರಿಂದ ನಗರದ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದರು.
ಆದರೆ ಈಗಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲವಾಗುತ್ತಿದೆ ಹಣಕಾಸಿನ ವ್ಯವಸ್ಥೆಯಿಂದ ಶಿಕ್ಷಣ ಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಾ ಇದ್ದಾರೆ ಶಿಕ್ಷಣ ಸಂಸ್ಥೆಗಳು ಮೇಲ್ವರ್ಗದ ಸಮುದಾಯಗಳ ಹತ್ತಿರ ಇರುವುದರಿಂದ ಕೆಲವರಿಗೆ ಸಮುದಾಯಗಳಿಗೆ ಶಿಕ್ಷಣ ಪಡೆದುಕೊಳ್ಳಲು ಸಮಸ್ಯೆ ಎದುರಾಗುತ್ತಾ ಇದೆ ಆದ್ದರಿಂದ ನಮ್ಮ ಸಂಸ್ಥೆಯಾದ ಭಾರತೀಯ ಬೌದ್ಧ ಮಹಾಸಭಾ ದಿ ವರ್ಲ್ಡ್ ಫಿಲಾಸ ಆಪ್ ಬುದ್ಧಿಸ್ಟ್ ವತಿಯಿಂದ ನಾಗಪುರದಲ್ಲಿ ವರ್ಲ್ಡ್ ಯೂನಿವರ್ಸಿಟಿಯನ್ನು ಸ್ಥಾಪನೆ ಮಾಡಲಾಗುವುದು ಈಗಾಗಲೇ 70 ಯೂನಿವರ್ಸಿಟಿಗಳ ಜೊತೆ ಮಾತುಕತೆ ಮಾಡಲಾಗಿದೆ.
ಅಲ್ಲಿರುವಂತ ಯೂನಿವರ್ಸಿಟಿಗಳಲ್ಲ ಯಾವ ರೀತಿ ಶಿಕ್ಷಣ ಪದ್ಧತಿ ಇರಬೇಕೆನ್ನುವುದು ಚರ್ಚೆ ಮಾಡುತ್ತಾ ಇದ್ದೇವೆ ಅವರ ಜೊತೆ ಶಿಕ್ಷಣ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು ಎಂದು ರಾಜರತ್ನ ಅಂಬೇಡ್ಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


