ಸಿನಿಮೀಯ ಶೈಲಿಯಲ್ಲಿ ಪಿಡಬ್ಲ್ಯೂಡಿ ನಿವೃತ್ತ ನೌಕರರೊಬ್ಬರ ಮನೆಯಿಂದ ದರೋಡೆಕೋರರು ಸುಮಾರು 36 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ನವಿ ಮುಂಬೈನಲ್ಲಿರುವ ಕಾಂತಿಲಾಲ್ ಯಾದವ್ ಎಂಬ ನಿವೃತ್ತ ಅಧಿಕಾರಿ ಮನೆಗೆ ಜುಲೈ 21ರಂದು ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಆರು ಜನ ನುಗ್ಗಿದ್ದಾರೆ.
ನಾವು ಭ್ರಷ್ಟಾಚಾರ ನಿಗ್ರಹ ದಳದವರು ಎಂದು ಮನೆಯವರನ್ನು ಹೆದರಿಸಿದ್ದಾರೆ. ಬಳಿಕ ಮನೆಯಲ್ಲಿದ್ದ ನಗದು, ಚಿನ್ನಾಭರಣ ಸೇರಿ ಹಲವು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದಾರೆ. ಕಾಂತಿಲಾಲ್ ಯಾದವ್ ಹಾಗೂ ಅವರ ಪತ್ನಿಯ ಮೊಬೈಲ್ ಗಳನ್ನು ಪಡೆದು, ಅವುಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ. ಅವರಿಂದಲೇ ಕಬೋರ್ಡ್ ಕೀಗಳನ್ನು ಪಡೆದು, ಎಲ್ಲ ಹಣ, ಚಿನ್ನಾಭರಣ ದೋಚಿದ್ದಾರೆ.
ಕಾಂತಿಲಾಲ್ ಯಾದವ್ ಅವರ ಮೂರು ಬೆಡ್ ರೂಮ್ ಗಳುಳ್ಳ ಫ್ಲ್ಯಾಟ್ ನಲ್ಲಿ 25.25 ಲಕ್ಷ ರೂ. ನಗದು, 3.8 ಲಕ್ಷ ರೂ. ಮೌಲ್ಯದ ಚಿನ್ನದ ಸರ, 4.20 ಲಕ್ಷ ರೂ. ಮೌಲ್ಯದ ಬ್ರೇಸ್ ಲೆಟ್, 40 ಸಾವಿರ ರೂ. ಮೌಲ್ಯದ ವಜ್ರ ಸೇರಿ ಹಲವು ವಸ್ತುಗಳನ್ನು ದರೋಡೆ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


