ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೇರಿದಂತೆ ನಾನಾ ವೃತ್ತಿಪರ ಕೋರ್ಸುಗಳಿಗೆ ಅನ್ವಯವಾಗುವಂತೆ ಅರ್ಹ ನೀಟ್ ಮತ್ತು ಸಿಇಟಿ ಅಭ್ಯರ್ಥಿಗಳು ನಮೂದಿಸಿರುವ ಆಪ್ಷನ್ಸ್ ಗಳನ್ನು ದಾಖಲಿಸಿ ಮೆರಿಟ್ ಮತ್ತು ರೋಸ್ಟ ಆಧಾರದ ಮೇಲೆ ಗುರುವಾರ (ಆ. 10) ಅಣಕು ಸೀಟು ಹಂಚಿಕೆ ಮಾಡಿ, ಫಲಿತಾಂಶ ಪ್ರಕಟಿಸಿದೆ. ಅಭ್ಯರ್ಥಿಗಳು ತಾವು ಬಯಸಿದಲ್ಲಿ ತಮ್ಮ ಆಪ್ಷನ್ಸ್ ಪರಿಷ್ಕರಿಸಲು ಅಥವಾ ಬದಲಿಸಲು ಈಗ ಅವಕಾಶವಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಈ ಬಗ್ಗೆ ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ, “ಮೊದಲನೇ ಸುತ್ತಿನಲ್ಲಿ ಆಪ್ಷನ್ಸ್ ನಮೂದಿಸದೆ ಇದ್ದಂತಹ ಅಭ್ಯರ್ಥಿಗಳು ಕೂಡ ಈ ಅವಕಾಶ ಬಳಸಿಕೊಳ್ಳಬುದು. ಅಂತಿಮ ದಾಖಲಾತಿಯನ್ನು ಆಧರಿಸಿ ಪ್ರಾಧಿಕಾರವು ಆ. 16ರಂದು ಮೊದಲನೇ ಸುತ್ತಿನ ನೈಜ ಸೀಟು ಹಂಚಿಕೆಯನ್ನು ಪ್ರಕಟಿಸಲಿದೆ’ ಎಂದಿದ್ದಾರೆ. ಅಲ್ಲದೆ, ಇದಾದ ನಂತರ ಅಭ್ಯರ್ಥಿಗಳಿಗೆ ಸೀಟುಗಳ ಬಗ್ಗೆ ನಿರ್ಧರಿಸಲು ನಾಲ್ಕು ಆಯ್ಕೆಗಳನ್ನು ಕೊಡಲಾಗುವುದು. ಅಭ್ಯರ್ಥಿಗಳು ಪೋಷಕರೊಡನೆ ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಇದರಿಂದ ಕಾಲಾವಕಾಶ ಸಿಗಲಿದೆ. ವಿವರಗಳಿಗಾಗಿ ಪ್ರಾಧಿಕಾರದ ವೆಬ್ಸೈಟ್ http://kea. kar. nic. in ನೋಡಬಹುದು ಎಂದು ಅವರು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


