nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!

    October 24, 2026

    ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ

    October 24, 2026

    ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

    October 24, 2026
    Facebook Twitter Instagram
    ಟ್ರೆಂಡಿಂಗ್
    • ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!
    • ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ
    • ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ
    • ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ
    • ಬಳತ (ಬಿ) ಗ್ರಾಮ ಪಂಚಾಯತ್ನಲ್ಲಿ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ: ‘ವಿಬಿ–ಜಿ ರಾಮ್ ಜಿ’ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕರೆ
    • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ
    • ನಂದಿಧ್ವಜ ಕಂಬ ಮುರಿತದಿಂದ ಮಾವುತನ ಪತ್ನಿ ಸಾವು ತನಕ! ಈ ಬಾರಿಯ ಮೈಸೂರು ದಸರಾದಲ್ಲಿ ನಡೆದಿದ್ದೇನು?
    • ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಭಾರತ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿಯಾಗಿದೆ: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್
    ತುಮಕೂರು September 15, 2023

    ಭಾರತ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿಯಾಗಿದೆ: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್

    By adminSeptember 15, 2023No Comments2 Mins Read
    shrinivas

    ತುಮಕೂರು: ನಾವೆಲ್ಲರೂ ಸಂವಿಧಾನಕ್ಕೆ ಬದ್ಧರಾಗಿ ಉತ್ತಮ ಪ್ರಜೆಗಳಾಗಿ ಬದುಕುವುದರ ಮೂಲಕ ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ಧಿಯ ಏಳಿಗೆಗಾಗಿ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಅಭಿಪ್ರಾಯಪಟ್ಟರು.

    ತುಮಕೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ  ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿದ ನಂತರ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರು ಇಲ್ಲಿ ಸೇರುವುದಕ್ಕೆ ಕಾರಣ ಡಾ:ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಕೊಟ್ಟಿರುವ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಎಲ್ಲ ವರ್ಗದ ಜನರಿಗೂ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ನೀಡಿದ್ದಾರೆ. ಎಲ್ಲರೂ ಸ್ವಾಭಿಮಾನದ ಬದುಕನ್ನು ನಡೆಸುವುದಕ್ಕೆ ಅವರು ದಿಟ್ಟ ಹೆಜ್ಜೆಯನ್ನು ಹಾಕಿ ಕೊಟ್ಟಿದ್ದಾರೆ ಎಂದು ಸ್ಮರಿಸಿದರು.

    ಭಾರತ ಸಂವಿಧಾನವು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನದಲ್ಲಿ ಎಲ್ಲರಿಗೂ ಒಂದೇ ರೀತಿಯ ಹಕ್ಕು ಮತ್ತು ಕರ್ತವ್ಯಗಳು ಹಾಗೂ ರಾಜ್ಯ ನಿರ್ದೇಶಕ ತತ್ವಗಳನ್ನು ಸಹ ನೀಡಲಾಗಿದೆ. ಭಾರತ ದೇಶದಲ್ಲಿ ಜನವರಿ 26, 1950ರಿಂದ ಸಂವಿಧಾನವನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲಾಗಿದೆ. ಆ ದಿನವನ್ನು ಗಣರಾಜ್ಯ ದಿನವೆಂದು ಪ್ರತಿ ವರ್ಷ ಆಚರಣೆ ಮಾಡುತ್ತೇವೆ ಎಂದರು.

    ಸಂವಿಧಾನದ ಮಹತ್ವವನ್ನು ಎಲ್ಲಾ ಜನರಿಗೂ ತಿಳಿಸುವುದಕ್ಕಾಗಿ ವಿಶ್ವಸಂಸ್ಥೆಯು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನಾಗಿ ಪ್ರತಿ ವರ್ಷವೂ ಒಂದೊಂದು ಸಂದೇಶದೊಂದಿಗೆ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಪ್ರಜಾಪ್ರಭುತ್ವದ  ವೈಶಿಷ್ಟ್ಯವೆಂದರೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಮತ್ತು ಜನರಿಗೆ ಸಂವಿಧಾನ ಪೀಠಿಕೆ ಮತ್ತು ಹಕ್ಕುಗಳ ಬಗ್ಗೆ ತಿಳಿಸಿದರೆ, ಅವರು ಉತ್ತಮ ಜೀವನವನ್ನು ಕಟ್ಟಿಕೊಳ್ಳುವ ಮೂಲಕ ರಾಷ್ಟ್ರಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ ಹಾಗೂ ಸಂವಿಧಾನದಲ್ಲಿರುವ ಕಾನೂನು ಮತ್ತು ಹಕ್ಕುಗಳನ್ನು ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

    ಎಲ್ಲಾ ಧರ್ಮದ ಜಾತಿಗಳಿಗೂ ಮೀಸಲಾತಿ ಕಲ್ಪಿಸಿರುವುದು ಕೂಡ ಸಂವಿಧಾನದಿಂದಲೇ ಎಂದ ಅವರು, ಅಂಬೇಡ್ಕರ್ ಅವರು ಸುಮಾರು 12 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಎಲ್ಲ ವರ್ಗದ ಜನರಿಗೂ ಸಮಾನವಾದ ಹಕ್ಕು ಮತ್ತು ಕರ್ತವ್ಯಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಆದ್ದರಿಂದ ಅವರಿಗೆ ನಾವೆಲ್ಲರೂ ಸದಾ ಆಭಾರಿಯಾಗಿದ್ದೇವೆ ಎಂದು ಹೇಳಿದರು.

    ಅಂಬೇಡ್ಕರ್ ಅವರು ದೂರದೃಷ್ಟಿ ಇಟ್ಟುಕೊಂಡು ಸಂವಿಧಾನವನ್ನು ಬರೆಯುವ ಮೂಲಕ ವಿಶ್ವದಲ್ಲಿ ಶ್ರೇಷ್ಠ ಮಾನವ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರು ಮಾತನಾಡಿ, ಒಂದು ದೇಶವನ್ನು ಮುನ್ನಡೆಸಬೇಕಾದರೆ ಅದಕ್ಕೆ ಬೇಕಾದಂತ ಎಲ್ಲ ಕಾನೂನು ಮತ್ತು ಅವಕಾಶಗಳನ್ನು ಕಲ್ಪಿಸಿ ಕೊಡುವಂತಹ ಮೂಲಭೂತ ಕಡತವೇ ಸಂವಿಧಾನವಾಗಿದೆ ಎಂದು ಹೇಳಿದರು.

    ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಶಯ ಎಂದರೆ ಜನರಿಂದ ಜನರಿಗಾಗಿ ಜನರಿಗೋಸ್ಕರ ಆಡಳಿತ ನಡೆಸುವುದು ಆಗಿದೆ. ಪ್ರತಿಯೊಬ್ಬ ನಾಗರಿಕನು ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ನೀಡಲಾಗಿದೆ. ಎಲ್ಲರೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿಕೊಳ್ಳುವುದಕ್ಕೆ ಅವಕಾಶವಿದೆ ಎಂದು ತಿಳಿಸಿದರು.

    ಸಂವಿಧಾನದ ಆಶಯವಾದ ರಾಜಕೀಯ ಸಮಾನತೆಯನ್ನು ಚುನಾವಣೆಯ ಮತದಾನದ ಮೂಲಕ ತಂದಿದ್ದೇವೆ. ಎಲ್ಲರಿಗೂ ಒಂದೇ ಮತದಾನದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ,  ತುಮಕೂರು ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಹಿಂದುಳಿದ ಕಲ್ಯಾಣ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಗಂಗಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಶಂಘ ಸಂಸ್ಥೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    admin
    • Website

    Related Posts

    ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!

    October 24, 2026

    ಹಬ್ಬಗಳ ಆಚರಣೆಯಿಂದ ಧಾರ್ಮಿಕ ಚಿಂತನೆ ಜಾಗೃತಿ: ಶಮಿಪೂಜೆಯಲ್ಲಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ

    October 22, 2026

    ತುಮಕೂರು ದಸರಾ ವೈಭವಕ್ಕೆ ತೆರೆ: ಅದ್ದೂರಿಯ ಜಂಬೂಸವಾರಿ: ಡಿಸಿಎಂ ಸೇರಿ ಗಣ್ಯರಿಂದ ಪುಷ್ಪಾರ್ಚನೆ

    October 22, 2026

    Comments are closed.

    Our Picks

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ!  ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ ಇಲ್ಲಿದೆ

    October 24, 2026

    ಪ್ರಧಾನಿ ಮೋದಿ ಯಾವ ಮೊಬೈಲ್ ಬಳಸುತ್ತಾರೆ? ರಹಸ್ಯ ಫೋನ್‌ ಹಿಂದಿನ ಸತ್ಯವೇನು?

    October 24, 2026

    ವಾಟ್ಸಾಪ್ ಬಳಕೆದಾರರೇ ಎಚ್ಚರ! 2027ರಿಂದ ಹೊಸ ನಿಯಮ, ಫೋನ್‌ ನಲ್ಲಿ ಸಿಮ್ ಇಲ್ಲದಿದ್ದರೆ ಆ್ಯಪ್ ಬಳಕೆಗೆ ತೊಂದರೆ

    October 24, 2026

    ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ₹15,000 ಸಿಗುತ್ತಾ? ಕೇಂದ್ರದ ಉದ್ಯೋಗ ಯೋಜನೆಯ ಅರ್ಹತೆಗಳೇನು?

    October 21, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಶಿರಾಗೇಟ್ ರಸ್ತೆಯಲ್ಲಿ ಕೊಳೆತ ಬೂದುಗುಂಬಳಕಾಯಿ: ಸಾರ್ವಜನಿಕರ ಗೋಳು, ಜಿಲ್ಲಾಡಳಿತ, ಪಾಲಿಕೆಯ ಜಾಣ ಕುರುಡು!

    October 24, 2026

     ನಟರಾಜು ಜಿ. ಎಲ್., ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ ಹಬ್ಬಗಳು ಬರುತ್ತವೆ, ಸಂಭ್ರಮ-ಸಡಗರವನ್ನು ಹೊತ್ತು ತರುತ್ತವೆ. ಜನ ಪರಸ್ಪರ…

    ಕೆಪಿಎಸ್‌ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ ಗೆ ಸಮ್ಮತಿ

    October 24, 2026

    ಸ್ಟಿಂಗ್ ಆಪರೇಷನ್ — ಕೆಪಿಎಸ್‌ಸಿ ಹಗರಣ | ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

    October 24, 2026

    ಶ್ರವಣೂರಿನಲ್ಲಿ 2ನೇ ವರ್ಷದ ಉಚಿತ ಕಣ್ಣಿನ ತಪಾಸಣೆ — ಶಸ್ತ್ರಚಿಕಿತ್ಸಾ ಶಿಬಿರ

    October 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.