ಬೆಂಗಳೂರು: ಬೆಂಗಳೂರಿನಲ್ಲಿ ಮೂರು ಬೀದಿನಾಯಿಗಳು ಕಣ್ಮರೆಯಾಗಿದ್ದು, ಕಾಣೆಯಾದ ಬೀದಿ ನಾಯಿಗಳನ್ನು ಹುಡುಕಿ ಕೊಡಬೇಕೆಂದು ಪೊಲೀಸರಿಗೆ ದೂರು ನೀಡಲಾಗಿದೆ.
ಕುಮಾರ ಪಾರ್ಕ್ ಬಳಿಯ ಕಂಪನಿಯೊಂದರ ಬಳಿ ಇದ್ದ ಬೀದಿ ನಾಯಿಗಳು ಕಾಣೆಯಾದ ಕುರಿತು ನಾಯಿಗಳಿಗೆ ಊಟ ಹಾಕಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಪ್ರಕಾಶ್ ಎಂಬುವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸ್ಥಳೀಯ ವ್ಯಕ್ತಿಗಳು ನಾಯಿಗಳನ್ನ ಬೇರೆಡೆ ತೆಗೆದುಕೊಂಡು ಹೋಗಿ ಬಿಟ್ಟಿರಬೇಕು ಎಂದು ಪ್ರಕಾಶ್ ಸಂಶಯ ವ್ಯಕ್ತಪಡಿಸಿದ್ದಾರೆ.


