ಬೆಂಗಳೂರು: ಧೂಮಪಾನ, ಮದ್ಯಪಾನ, ಡ್ರಗ್ ವ್ಯಸನದಿಂದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಶ್ವವಾಯುವಿಗೆ ಒಳಗಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ತಿಳಿಸಿದೆ.
ವಿಶ್ವ ಪಾರ್ಶ್ವವಾಯು ದಿನದ ಪ್ರಯುಕ್ತ ಸಂಸ್ಥೆಯು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ‘ದೇಶದಲ್ಲಿ ವಾರ್ಷಿಕ ಪಾರ್ಶ್ವವಾಯು ಪೀಡಿತರಲ್ಲಿ ಶೇ. 14ರಷ್ಟು ಮಂದಿ ಯುವಜನರಾಗಿದ್ದಾರೆ ಎಂದರು.
ಸಂಸ್ಥೆಯಲ್ಲಿ ಪಾರ್ಶ್ವವಾಯು ಪೀಡಿತರ ಆರೈಕೆಗೆ 24 ಹಾಸಿಗೆಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದೆ.


