ಮೈಸೂರು: ಸರ್ಕಾರಿ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ನಿಲಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಮುಖ್ಯ ಶಿಕ್ಷಕ ಮಹದೇವಯ್ಯ, ಶಿಕ್ಷಕಿ ಮೀನಾಕ್ಷಿ ಮತ್ತು ವಿದ್ಯಾರ್ಥಿಗಳಾದ ಧನುಷ್, ಪೃಥ್ವಿ, ಹಾಗೂ ಗೌತಮ್ ಗೆ ಗಂಭೀರ ಗಾಯವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಸಿಲಿಂಡರ್ ಘಟನೆ ಬಗ್ಗೆ ನರಸೀಪುರ ಪೊಲೀಸರು ಮಾಹಿತಿ ಪಡೆಯುತ್ತಿದ್ದು, ಆಸ್ಪತ್ರೆಗೆ ಬಿಇಒ ಶೋಭಾ ಭೇಟಿ ನೀಡಿದ್ದಾರೆ.


