ಸುರಕ್ಷಿತ ಪಟಾಕಿ ಮಾರಾಟ ಮಾಡುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಬಾರಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, 70 ಆಟದ ಮೈದಾನಗಳಲ್ಲಿ 426 ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ.
ಆಟದ ಮೈದಾನ ಮತ್ತು ಅಲ್ಲಿ ತೆರೆಯಲಿರುವ ತಾತ್ಕಾಲಿಕ ಮಳಿಗೆಗಳ ಪಟ್ಟಿಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ರವಾನಿಸಿದೆ.
ಅತ್ತಿಬೆಲೆಯಲ್ಲಿ ಸಂಭವಿಸಿದ ಭೀಕರ ಪಟಾಕಿ ದುರಂತದಿಂದ ಎಚ್ಚೆತ್ತುಕೊಂಡ ಪಾಲಿಕೆ ಈ ನಿರ್ಧಾರಕ್ಕೆ ಬಂದಿದೆ.


