ಪತಿ ಅಥವಾ ಪತ್ನಿ ಬದುಕಿರುವಾಗಲೇ ಮತ್ತೊಂದು ಮದುವೆಯಾಗುವುದು ಅಪರಾಧ. ಇದರಲ್ಲಿ ತಪ್ಪಿತಸ್ಥ ಪತಿ ಅಥವಾ ಪತ್ನಿ ವಿರುದ್ಧ ಮಾತ್ರ ಕಾನೂನು ಕ್ರಮ ಜರುಗಿಸಬಹುದೇ ವಿನಃ ಕುಟುಂಬ ಸದಸ್ಯರನ್ನು ಒಳಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮರು ಮದುವೆ, ವಂಚನೆ, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಕುಟುಂಬ ಸದಸ್ಯರನ್ನೂ ಸೇರಿಸಿ ದಾಖಲಿಸಿರುವ ಎಫ್ ಐಆರ್ ಅನ್ನು ರದ್ದುಪಡಿಸುವಂತೆ ಕೋರಿ ಶ್ರೀನಿವಾಸ್ ಸಾಗರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ತೀರ್ಪು ನೀಡಿದೆ.


