ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ದೂರದೃಷ್ಟಿ ನಾಯಕ ದಿ. ಅನಂತ್ ಕುಮಾರ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ಬೆಂಗಳೂರಿನ ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಅನಂತಸ್ಮೃತಿ ನಡಿಗೆ ಪಂಜಿನ ಮೆರವಣಿಗೆಯಲ್ಲಿ ಅವರು ಮಾತನಾಡಿದರು. ನಾಡಿನ ದಿಗ್ಗಜರ ಶ್ರೇಷ್ಠ ಬದುಕು ನಮಗೆಲ್ಲ ನಿತ್ಯ ನಿರಂತರ ಪ್ರೇರಣೆಯ ಚಿಲುಮೆಯಾಗಿದ್ದು, ನಾಡಿಗೆ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದಿ. ಅನಂತ್ ಕುಮಾರ್ ಪುಣ್ಯಸ್ಮರಣೆ ಅರ್ಥಗರ್ಭಿತವಾಗಿ ಆಚರಿಸಲಾಯಿತು ಎಂದರು.
ಬೆಂಗಳೂರಿನಲ್ಲಿ ಅನಂತ ಸ್ಮೃತಿ ನಡಿಗೆ ಕಾರ್ಯಕ್ರಮದಲ್ಲಿ ಆರ್ ಅಶೋಕ್ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು, ತನ್ನ ನಾಯಕತ್ವ ಗುಣ, ಕರ್ತೃತ್ವಶಕ್ತಿ, ಮೇರು ವ್ಯಕ್ತಿತ್ವದ ಮೂಲಕ ರಾಷ್ಟ್ರ ಮಟ್ಟದ ನಾಯಕ ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿದ, ಬಿಜೆಪಿಯ ಅಪ್ರತಿಮ ಸಂಘಟಕರು ಹಾಗೂ ನಮ್ಮೆಲ್ಲರ ನಾಯಕರಾಗಿದ್ದ ದಿ. ಅನಂತಕುಮಾರ್ ಪುಣ್ಯಸ್ಮರಣೆಯ ದಿನದಂದು ನಡೆದ ಪಂಜಿನ ಮೆರವಣಿಗೆ ನಡೆಸಲಾಯಿತು ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಪಿ. ವಿ. ಕೃಷ್ಣಭಟ್, ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಮಣ್ಯ, ಸಿ. ಕೆ. ರಾಮಮೂರ್ತಿ ಭಾಗವಹಿಸಿದ್ದರು.


