ಬೆಳಗಾವಿ: ಉಚಗಾಂವ ಗ್ರಾಮದ ಶ್ರೀ ಹನುಮಾನ ಯುವಕ ಮಂಡಳದವರು ದೀಪಾವಳಿಯ ಪ್ರಯುಕ್ತವಾಗಿ ನಿರ್ಮಾಣ ಮಾಡಿದ್ದ ಕಿಲ್ಲಾವನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಗ್ರಾಮಸ್ಥರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಧುರಾ ತೇರ್ಸೆ, ಉಪಾಧ್ಯಕ್ಷ ಬಾಳು ತೇರ್ಸೆ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯೋಗಿತಾ ದೇಸಾಯಿ, ಹನುಮಾನ ಯುವಕ ಮಂಡಳದ ಪದಾಧಿಕಾರಿಗಳು, ಲಕ್ಷ್ಮಣ ಚೌಗುಲೆ, ಬಾಬು ಫರ್ನಾಂಡೀಸ್, ವಾಯ್ ಬಿ ಚೌಗುಲೆ, ಅಶೋಕ ಹುಕ್ಕೇರಿಕರ್, ಸುನಿಲ ದೇಸಾಯಿ, ವಕೀಲರಾದ ಶರದ್ ದೇಸಾಯಿ, ಶರದ್ ದೇಸಾಯಿ, ಪತ್ರಕರ್ತರಾದ ಎನ್ ಒ ಚೌಗುಲೆ ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.


