ಬೆಂಗಳೂರು: ರೈಲ್ವೆಯ ಮಹತ್ವದ ಯೋಜನೆಯಾದ ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್ ಆರ್ ಪಿ) ಕಾರಿಡಾರ್-2ರಲ್ಲಿ ಎತ್ತರಿಸಿದ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪಿಯರ್ (ಪಿಲ್ಲರ್) ನಿರ್ಮಾಣ ಕಾರ್ಯ ಆರಂಭವಾಗಿದೆ.
ಚಿಕ್ಕಬಾಣಾವರ-ಬೈಯಪ್ಪನಹಳ್ಳಿ ಮಾರ್ಗವು ಕಾರಿಡಾರ್-2 (ಮಲ್ಲಿಗೆ ಮಾರ್ಗ) ಆಗಿದ್ದು, 25 ಕಿ. ಮೀ. ದೂರವನ್ನು ಹೊಂದಿದೆ.
ಅದರಲ್ಲಿ 16.5 ಕಿ. ಮೀ. ನೆಲಮಟ್ಟದಲ್ಲಿ ಇರಲಿದೆ. ಹೆಬ್ಬಾಳದಿಂದ ಯಶವಂತಪುರದವರೆಗೆ 8.5 ಕಿ. ಮೀ. ನಷ್ಟು ಎತ್ತರಿಸಿದ (ಎಲಿವೇಟೆಡ್) ಮಾರ್ಗ ನಿರ್ಮಾಣಗೊಳ್ಳಲಿದೆ.


