ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಪತ್ರಕರ್ತರು ಅಪ್ರಭುದ್ಧರು ಎನ್ನುವ ಅರ್ಥದಲ್ಲಿ ನೀಡಿದ್ದ ಹೇಳಿಕೆಯನ್ನ ಖಂಡಿಸಿ ಇವತ್ತು ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಕರ್ತರಿಂದ ಖಂಡನಾ ಸಭೆ ನಡೆಸಲಾಯಿತು.
ಸಭೆಯಲ್ಲಿ ಸಚಿವೆ ಹೆಬ್ಬಾಳ್ಕರ ವಿರುದ್ಧ ಐದು ಪ್ರಮುಖ ಖಂಡಣಾ ನಿರ್ಣಯವನ್ನ ತೆಗೆದುಕೊಳ್ಳಲಾಯಿತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರು ಬೆಳಗಾವಿ ಪತ್ರಕರ್ತರ ವಿರುದ್ಧ ನೀಡಿದ್ದ ಹೇಳಿಕೆಯನ್ನ ಖಂಡಿಸಲಾಯಿತು. ಸಚಿವರು ತಮ್ಮ ಹೇಳಿಕೆಯನ್ನ ಕೂಡಲೇ ಹಿಂಪಡೆದುಕೊಂಡು ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲಾಯಿತು.
ಸಚಿವರ ಹೇಳಿಕೆಯ ವಿರುದ್ಧ ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು ,ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ದೂರು ನೀಡಲು ನಿರ್ಧರಿಸಲಾಯಿತು. ಸಭೆಯಲ್ಲಿ ತೆಗೆದುಕೊಂಡು ಈ ನಿರ್ಣಯಗಳನ್ನ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ಗಮನಕ್ಕೆ ತರಲು ನಿರ್ಧರಿಸಲಾಯಿತು.
ನವೆಂಬರ್11 ರಂದು ಕನ್ನಡ ಭವನದಲ್ಲಿ ಪತ್ರಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಬೆಳಗಾವಿ ಪತ್ರಕರ್ತರ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಗರುವಾಗಿ ಮಾತನಾಡಿದ್ದರು.


