ಬೆಂಗಳೂರು: ಬೆಂಗಳೂರಿನ ಸಿ.ಸಿ.ಬಿ.ಯ ಸಂಘಟಿತ ಅಪರಾಧ ದಳದ ಪೊಲಿಸರು ರೌಡಿಶೀಟರ್ ಹಾಗೂ ಅವರ ಸಹಚರರನ್ನು ಬಂಧಿಸಿದ್ದಾರೆ. ಸಾರ್ವಜನಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ರೌಡಿಶೀಟರ್ ಗಳು ಮತ್ತು ಅವರ 3 ಜನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನ.16 ರಂದು ಪೀಣ್ಯ ಪೊಲೀಸ್ ಠಾಣಾ ಸರಹದ್ದಿನ ನ್ಯೂ ಮಂಜುಳ ಪಬ್ಲಿಕ್ ಶಾಲೆಯ ಹತ್ತಿರ ಸಾರ್ವಜನಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ. ಅವರಿಂದ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಆರೋಪಿತರ ಮೇಲೆ ದಾಳಿ ಮಾಡಿ 05 ಜನರನ್ನು ವಶಕ್ಕೆ ಪಡೆದು, ಅವರಿಂದ ಮಾರಕಾಸ್ತ್ರಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ಕಾರುಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಸಿ.ಸಿ.ಬಿ.ಯ ಸಂಘಟಿತ ಅಪರಾಧ ದಳದ (ಪಶ್ಚಿಮ) ಅಧಿಕಾರಿ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿರುತ್ತಾರೆ.
ಆರೋಪಿಗಳ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿರುತ್ತದೆ.


