ಸಾತನೂರಿನಲ್ಲಿ ಟೆಂಟ್ ಹಾಕಿ ಬ್ಲೂ ಫಿಲಂ ಪ್ರಸಾರ ಡಿಕೆಶಿ ಮಾಡಿದ್ದರು ಎಂಬ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇಂದಿರಾ ಗಾಂಧಿ ಹೆಸರಲ್ಲಿ ಚಿತ್ರಮಂದಿರ ಇಟ್ಟಿದ್ದೆ.
ನಮ್ಮೂರಿಗೆ ಹೋಗಿ, ಜನರ ಸರ್ವೇ ಮಾಡಿ. ಯಾರಾದರೂ ಒಬ್ಬ ಬ್ಲೂ ಫಿಲಂ ತೋರಿಸಿದ್ದಾರೆ ಎಂದು ಹೇಳಿದರೆ, ನಾನು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಡಿಕೆಶಿ ಸವಾಲ್ ಹಾಕಿದ್ದಾರೆ.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ತಮ್ಮ ಘನತೆಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.


