ಬೆಂಗಳೂರು: ಆನ್ ಲೈನ್ ಹೂಡಿಕೆ ಹೆಸರಿನಲ್ಲಿ ನಗರದ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳಿಂದ ₹ 94.95 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಸೈಬರ್ ಕ್ರೈಂ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮಹದೇವಪುರದ ಸಾಫ್ಟ್ ವೇರ್ ಎಂಜಿನಿಯರ್ ರಾಮ್ ತೇಜ್ (33) ಹಾಗೂ ವೈಟ್ ಫೀಲ್ಡ್ ನ ಸಾಫ್ಟ್‌ವೇರ್ ಎಂಜಿನಿಯರ್ ಸೌರಭ್ ಕುಮಾರ ಶರ್ಮಾ(40) ಅವರು ಹಣ ಕಳೆದುಕೊಂಡಿದ್ದಾರೆ. ತಮಗಾದ ವಂಚನೆ ಬಗ್ಗೆ ಪ್ರತ್ಯೇಕವಾಗಿ ಠಾಣೆಗಳಿಗೆ ದೂರು ನೀಡಿದ್ದಾರೆ.
ಈ ಪ್ರಕರಣ ಪೊಲೀಸ್ ಅಧಿಕಾರಿಗಳು ದೂರನ್ನು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಆನ್ಲೈನ್ ಬರುವ ಜಾಹಿರಾತು ನಂಬಿ ಮೋಸ ಹೋಗ್ಬೇಡಿ ಅಂತ ಅಧಿಕಾರಿಗಳು ತಿಳಿಸಿದ್ದಾರೆ.


