ಕರ್ನಾಟಕ ವಿದ್ಯುತ್ ನಿಗಮದ ಮಾಜಿ ನಿರ್ದೇಶಕ, ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ ಸ್ಥಾಪಕ ಅಧ್ಯಕ್ಷ ಎಂ. ಬಿ. ಜಯರಾಮ್ ಅವರನ್ನು ಭುವನೇಶ್ವರದ ಉಟ್ಕಳ ವಿಶ್ವವಿದ್ಯಾಲಯ ಜೀವಮಾನದ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಸಾರ್ವಜನಿಕ ಸಂಪರ್ಕ ಹಾಗೂ ಸಂವಹನದಲ್ಲಿ 45 ವರ್ಷಗಳಲ್ಲಿ ಮಾಡಿದ ಕೆಲಸವನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ನ.23ರಂದು ನಡೆಯಲಿರುವ 7ನೇ ರಾಷ್ಟ್ರೀಯ ಮಾಧ್ಯಮ ಸಮಾವೇಶದ ಸಮಾರೋಪದಲ್ಲಿ ಒಡಿಶಾದ ಮಾಧ್ಯಮ, ಸಂವಹನ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


