ಬೆಂಗಳೂರು ನಗರದಲ್ಲಿರುವ ಪೇಯಿಂಗ್ ಗೆಸ್ಟ್ (ಪಿ. ಜಿ) ಕಟ್ಟಡಗಳ ಬಗ್ಗೆ ಮಾಹಿತಿ ದಾಖಲಿಸಲು ವೆಬ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದ್ದು, ಮಾಹಿತಿ ಭರ್ತಿ ಮಾಡಲು ಕಟ್ಟಡಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ’ ಎಂದು ಕಮಿಷನರ್ ಬಿ. ದಯಾನಂದ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾರತ್ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದು ಯಶಸ್ವಿಯಾದರೆ, ನಗರದ ಎಲ್ಲ ಕಡೆಯೂ ವಿಸ್ತರಣೆ ಮಾಡಲಾಗುವುದು’ ಎಂದರು.
ಪಿಜಿಗಳಲ್ಲಿರುವ ಅವ್ಯವಸ್ಥೆ ಬಗ್ಗೆ ಪಿಜಿಯ ಅಕ್ಕ ಪಕ್ಕದ ಮನೆಯವರಿಂದ ಬಿಬಿಎಂಪಿಗೆ ದೂರುಗಳು ಬರುತ್ತಿವೆ. ಹೀಗಾಗಿ ಬಿಬಿಎಂಪಿ ಪಿಜಿಗಳಿಗೆ ಹೊಸ ಗೈಡ್ ಲೈನ್ ಬಿಡುಗಡೆ ಮಾಡಲು ಮುಂದಾಗಿದೆ. ಇದರ ನಡುವೆ ಈಗ ಬೆಂಗಳೂರಿನ ಪಿಜಿಗಳಿಗೆ ಅಂಕಿ ಅಂಶ ಮ್ಯಾನೇಜ್ ಮಾಡಲು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಸಲಹೆ ನೀಡಿದ್ದಾರೆ.
ಜೊತೆಗೆ ಪಿಜಿ, ಹಾಸ್ಟಲ್ ಗಳಿಗೆ ವೆಬ್ ಪೋರ್ಟಲ್ ನೀಡಲಾಗಿದ್ದು ಅದಕ್ಕೆ ಪಿಜಿ ಮಾಲೀಕರು ಮಾಹಿತಿ ಅಪ್ಲೋಡ್ ಮಾಡಬಹುದು ಎಂದು ತಿಳಿಸಿದ್ದಾರೆ.


