ಕಾಂತರಾಜು ವರದಿಯನ್ನು ಸಿದ್ಧಪಡಿಸುತ್ತಿರುವ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ, ಹೊಸದೊಂದು ವಿಚಾರ ಬಾಯಿಬಿಟ್ಟಿದೆ. ಕಾಂತರಾಜು ವರದಿಯ ಮೂಲ ಪ್ರತಿ ಕಾಣೆಯಾಗಿದ್ದು, ವರ್ಕಶೀಟ್ ನಲ್ಲಿ ಕೆಲ ಅಂಶಗಳು ಸಿಗುತ್ತಿಲ್ಲ ಅಷ್ಟೇ ಎಂದು ಖುದ್ದು ಜಯಪ್ರಕಾಶ್ ಹೆಗ್ಡೆ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ವರ್ಕ್‌ಶೀಟ್ ನಲ್ಲಿ ಕೆಲ ಅಂಶಗಳು ಸಿಗುತ್ತಿಲ್ಲ. ಬಾಕಿಯಿರುವ ಎಲ್ಲಾ ದಾಖಲಾತಿಗಳು ಸೇಫಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಜಾತಿಗಣತಿ ವರದಿ ವಿಚಾರ ಕ್ಷಣಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಇಷ್ಟು ದಿನಗಳ ಕಾಲ ಜಾತಿಗಣತಿ ಸರ್ಕಾರದ ಕೈ ಸೇರುತ್ತದೆ ಎನ್ನುತ್ತಿದ್ದ ಆಯೋಗದ ಸದಸ್ಯರು, ಈಗ ಮೂಲ ಪ್ರತಿಯೇ ಇಲ್ಲ ಎಂದಿರುವುದು ಹೊಸ ಗೊಂದಲ ಸೃಷ್ಠಿಸಿದೆ. ಆದ್ರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿರುವ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೂಲ ಪ್ರತಿ ಇಲ್ಲ. ಆದ್ರೆ ದತ್ತಾಂಶಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದಿದ್ದಾರೆ.
ಜಾತಿಗಣತಿಯ ಕಾಂತರಾಜು ವರದಿಯನ್ನು ಸರ್ಕಾರಕ್ಕೆ ಡಿಸೆಂಬರ್ ಅಥವಾ ಜನವರಿಯಲ್ಲಿ ಹಸ್ತಾಂತರ ಮಾಡುತ್ತೇವೆ ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ವರದಿಯಲ್ಲಿ ಯಾವುದೇ ಲೋಪದೋಷಗಳು ಇಲ್ಲ. ಎಲ್ಲವೂ ಸರಿಯಾಗಿದೆ. ಮೂಲ ಪ್ರತಿ ಇಲ್ಲದೇ ಇರುವುದು ನಿಜ. ಕಾಣೆಯಾಗಿದೆ. ಆದ್ರೆ ಇದರಿಂದ ಏನೇನೂ ಸಮಸ್ಯೆ ಇಲ್ಲ. ದತ್ತಾಂಶ ನಮ್ಮ ಬಳಿಯಿದೆ. ವರದಿಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ವರದಿಯನ್ನು ಸರ್ಕಾರಕ್ಕೆ ನೀಡುತ್ತೇವೆ ಎಂದಿದ್ದಾರೆ.


