ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಧು ಚಂದ್ರ ಕಾಲ ಮುಕ್ತಾಯವಾಗಿದೆ. ಈ ಆರು ತಿಂಗಳ ಕಾಲಾವಧಿಯಲ್ಲಿ ವಿರೋಧ ಪಕ್ಷದ ಸಮರ್ಥವಾದ ನಾಯಕರು ಇಲ್ಲದೆ ಎರಡು ಅಧಿವೇಶನಗಳನ್ನು ಸರ್ಕಾರ ಪೂರ್ಣಗೊಳಿಸಿದೆ. ಈಗ ಚಳಿಗಾಲದ ಅಧಿವೇಶನ ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ನಡೆಯಲಿದ್ದು ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ವಿರೋಧ ಪಕ್ಷದ ನಾಯಕರನ್ನಾಗಿ ಅಳದು ತೂಗಿ ಆರ್ ಅಶೋಕ್ ಅವರನ್ನು ನೇಮಕ ಮಾಡಲಾಗಿದೆ.
ಮಾಜಿ ಮುಖ್ಯಮಂತ್ರಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಬಿಎಸ್ ವೈ ಅವರ ಪುತ್ರ ಬಿಎಸ್ ವೈ ವಿಜಯೇಂದ್ರ ಈಗ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಬಿಜೆಪಿಯ ಈ ಜೋಡೆತ್ತುಗಳಿಗೆ ಸವಾಲುಗಳು ಸರಮಾಲೆಯೇ ಮುಂದಿದೆ ಈ ಕಡೆ ಸರ್ಕಾರದ ವೈಫಲ್ಯ ಮತ್ತು ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಅಧ್ಯಕ್ಷರ ಹೆಗಲ ಮೇಲಿದೆ ಅದರ ಜೊತೆಗೆ ಸ್ವಹಪಕ್ಷದ ಶಾಸಕರು ಆಪರೇಷನ್ ಹಸ್ತಕ್ಕೆ ಗುರಿಯಾಗುವ ಸಂಭವ ಹೆಚ್ಚಾಗಿದೆ.
ಅವರನ್ನು ಪಕ್ಷದಲ್ಲಿ ಹಿಡಿದುಕೊಳ್ಳುವ ಹಾಗೂ ಭರವಸೆ ಮೂಡಿಸುವ ಜವಾಬ್ದಾರಿ ಇವರ ಹೆಗಲ ಮೇಲಿದೆ ಪಕ್ಷದ ರೆಬೆಲ್ ನಾಯಕರಗಳ ಸಂಖ್ಯೆ ಹೆಚ್ಚಿದ್ದು ಅವರನ್ನು ಕೂಡ ಸಮಾಧಾನ ಪಡಿಸುವ ಮತ್ತು ಪಕ್ಷ ಸಂಘಟನೆಗೆ ಬಲ ನೀಡುವ ಹಾಗೂ ಕಾರ್ಯಕರ್ತರಿಗೆ ಭರವಸೆಯ ಸಂದೇಶ ಮೂಡಿಸಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೈಕಮಾಂಡ್ ಹಾಗೂ ನಾಯಕರುಗಳು ಸ್ವಲ್ಪ ನಿರ್ಲಕ್ಷ್ಯ ಮಾಡಿದರು ಕೂಡ ಪಕ್ಷದಲ್ಲಿ ಹೆಚ್ಚಿನ ಡ್ಯಾಮೇಜ್ ವಾಗುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಬಿಜೆಪಿ ಯ ಆಂತರಿಕ ವಿಷಯವಾದರೂ ಕೂಡ ಆಡಳಿತರೂಢ ಕಾಂಗ್ರೆಸ್ ಗೆ ವರವಾಗಲಿದೆ .ಭಾರತೀಯ ಜನತಾ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಅಥವಾ ಪ್ರತಿಪಕ್ಷ ನಾಯಕರ ಸ್ಥಾನ ಉತ್ತರ ಕರ್ನಾಟಕ ಸಿಗಬೇಕಾಗಿತ್ತು ಎಂಬುದು ಕೂಗು ಅಸಮಾಧಾನ ಇಲ್ಲಿ ನಾಯಕರುಗಳಲ್ಲಿ ಇದೆ.
ಇದೇ ವಿಷಯವನ್ನು ಆಧಾರವಾಗಿಟ್ಟು ವಿಜಯಪುರದ ಶಾಸಕರಾದ ಬಸನಗೌಡ ಯತ್ನಾಳ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಇದ್ದಾರೆ. ಈ ಅಸಮಾಧಾನ ಬಹು ಮುಖ್ಯವಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಬಿಎಸ್ ವೈ ವಿಜೇಂದ್ರ ಅವರಿಗೆ ಬಹುದೊಡ್ಡ ಸವಾಲಾಗಿ ನಿಂತಿದೆ. ಅದರ ಜೊತೆಗೆ ಪಕ್ಷದ ಪದಾಧಿಕಾರಿಗಳು ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದ ಜವಾಬ್ದಾರಿ ನೀಡುವುದು ಮತ್ತು 2024ಕ್ಕೆ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಬಿಜೆಪಿ ಎತ್ತಕ್ಕೆ ತೆಗೆದುಕೊಳ್ಳುವ ಕಸರತ್ತು ಮಾಡಬೇಕಾಗುತ್ತದೆ.
ಒಟ್ಟಾರೆ ಭಾರತೀಯ ಜನತಾ ಪಕ್ಷಕ್ಕೆ ಇದು ಸಂಘರ್ಷದ ಸಮಯವಾಗಿದ್ದು ಇದನ್ನು ಈ ಜೋಡೆ ಎತ್ತುಗಳು ಯಾವ ರೀತಿ ನಿಭಾಯಿಸುತ್ತವೆ ಎನ್ನುವುದೇ ಬಹುದೊಡ್ಡ ಸವಾಲಿನ ಪ್ರಶ್ನೆಯಾಗಿದೆ.


