ಪರಭಾಷಾ ಚಿತ್ರಗಳ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ ಆಗಿದ್ದಾರೆ. ನಟ ಧನ್ನೀರ್ ಅಭಿನಯದ “ಕೈವ” ಚಿತ್ರದ ಟ್ರೈಲರ್ ಬಿಡುಗಡೆ ವೇಳೆ ಮಾತನಾಡಿದ ದರ್ಶನ್, ಯಾರಾದರೂ ನಮ್ಮ ತಾಯಿ ವಿಷಯಕ್ಕೆ ಬಂದರೆ ಬಿಡ್ತೀವಾ ಇಲ್ಲ ತಾನೆ. ಹಾಗೆ ಕೂಡ ಕನ್ನಡ ಚಿತ್ರರಂಗದ ವಿಷಯಕ್ಕೆ ಬಂದರೂ ಅಷ್ಟೇ. ಇದು ಪ್ರೀತಿಯೋ ಸ್ವಾರ್ಥನೋ ಮೊದಲು ಕನ್ನಡ ಚಿತ್ರಗಳನ್ನು ಪ್ರೀತಿಸಿ, ಅವುಗಳನ್ನು ಪ್ರೋತ್ಸಾಹ ಮಾಡಿ, ಇಲ್ಲದಿದ್ದರೆ ಪರಭಾಷಿಕರ ಹಾವಳಿ ಹೆಚ್ಚಾಗಿ ಬಿಡುತ್ತದೆ ಹುಷಾರು ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದರು.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಿತ್ರರಂಗದ ಯುವ ನಟರಿಗೆ ಕಿವಿಮಾತು ಹೇಳಿದರು. ನಟ ಧನ್ನೀರ್ ಅಭಿನಯದ ‘ಕೈವ್’ ಚಿತ್ರದ ಟ್ರೈಲರ್ ಬಿಡುಗಡೆಗೆ ದರ್ಶನ್ ಬಂದಿದ್ದರು. ಈ ವೇಳೆ ಮಾತನಾಡಿ, ಅಭಿಷೇಕ್ ಅಂಬರೀಷ್, ಧನ್ನೀರ್ ಚಿಕ್ಕಣ್ಣ ಸೇರಿದಂತೆ ಬಹುತೇಕ ಸ್ನೇಹಿತರು, ನಟರ ಪೋನ್ ನಂಬರ್ ಎಲ್ಲರ ಬಳಿಯೂ ಇರುತ್ತೆ. ಯಾರೇ ಏನೇ ಅಂದರೂ ಹಿತ್ತಾಳೆ ಕಿವಿಯಾಗಬೇಡಿ. ಒಬ್ಬರಿಗೊಬ್ಬರು ಪೋನ್‌ಮಾಡಿಕೊಳ್ಳಿ, ಒಂದೇ ದಿನ ತಮ್ಮ ಚಿತ್ರ ಬರದ ಹಾಗೆ ನೋಡಿಕೊಳ್ಳಿ ಇದರಿಂದ ಎಲ್ಲರಿಗೂ ಒಳ್ಳೆಯದಾಗುತ್ತೆ ಎಂದು ಹೇಳಿದರು.


