ಕನ್ನಡ ಇಂಡಸ್ಟ್ರಿ ನನಗೆ ಅನ್ನ ಕೊಟ್ಟಿದೆ, ಒಂದ್ ಹಿಟ್ ಆದ ಬಳಿಕ ಇಂಡಸ್ಟ್ರಿಯನ್ನು ಬಿಡಲಾರೆ ಎಂದು ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರು ಹೇಳಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ನಡೆದ ಇಂಟರ್ʼನ್ಯಾಷನಲ್ ಫಿಲ್ಡ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾನೂ ಎಲ್ಲೂ ಹೋಗಲ್ಲ. ಬೇರೆ ಇಂಡಸ್ಟ್ರಿಗಳ ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸುವ ಆಫರ್ ಗಳು ಬಂದರೂ ಅವುಗಳು ತಿರಸ್ಕರಿಸಿದ್ದೇನೆ ಎಂದರು.
ಬೇರೆಯವರ ಹಾಗೆ ಒಂದು ಹಿಟ್ ಬಂದ ಕೂಡಲೇ ಚಿತ್ರರಂಗ ಬಿಟ್ಟು ಹೋಗುವಂತೆ ನಾನು ಮಾಡಲಾರೆ ಎಂದರು. ರಿಷಬ್ ಶೆಟ್ಟಿ ಈ ಮಾತನ್ನು ಯಾರಿಗೆ ಹೇಳಿದರು ಎಂದು ಈಗ ಚರ್ಚೆ ಶುರುವಾಗಿದೆ.


