ಬೆಂಗಳೂರು: ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘದ ಹಣ ದುರುಪಯೋಗ ಪಡಿಸಿಕೊಂಡ ಸಂಬಂಧ ಹಾಲಿ ಅಧ್ಯಕ್ಷ ಶಾಂತರಾಮ್ ವಿರುದ್ಧ ನಗರದ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್ ಪಿಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಎ. ನಾಗನಗೌಡ ದೂರು ನೀಡಿದ್ದಾರೆ. ‘2017ರಿಂದ 2020ರ ಅವಧಿಯಲ್ಲಿ ಶಾಂತಾರಾಮ್ ಅವರು ಖರ್ಚು, ವೆಚ್ಚಗಳ ಬಿಲ್ ಗಳಿಗೆ ನನ್ನ ಸಹಿ ನಕಲು ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿ ದೂರು ನೀಡಿದ್ದಾರೆ.


