ಕಾಂಗ್ರೆಸ್ ಮುಖಂಡ ಉಮಾಪತಿ ಶ್ರೀನಿವಾಸ್ ಗೌಡ ಅವರನ್ನು ಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೊಮ್ಮನಹಳ್ಳಿಯ ವಿವೇಕಾನಂದ ವೃತ್ತದಲ್ಲಿ ಶನಿವಾರ ಸ್ಥಳೀಯ ಬಿಜೆಪಿ ಘಟಕ ಪ್ರತಿಭಟನೆ ಆಯೋಜಿಸಿತ್ತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಎಂ. ಸತೀಶ್ ರೆಡ್ಡಿ, ಉಮಾಪತಿ ಶ್ರೀನಿವಾಸ್ ಗೌಡ ವರ್ಗಾವಣೆ ದಂಧೆ ನಡೆಸಿರುವುದು ಆಡಿಯೊ ಸಂಭಾಷಣೆಯಲ್ಲಿ ಸ್ಪಷ್ಟವಾಗಿದೆ. ಸರ್ಕಾರ ನೇರವಾಗಿ ವರ್ಗಾವಣೆ ದಂಧೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ ಎಂದರು.


