ಸಿಎಂ ನೇತೃತ್ವದಲ್ಲಿ ನಿನ್ನೆ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ಸಚಿವರು ಹಾಗೂ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಬಿಜೆಪಿ–ಜೆಡಿಎಸ್ ಜಂಟಿಯಾಗಿ ಅಟ್ಯಾಕ್ ಮಾಡುತ್ತಿವೆ. ಕೇವಲ ಸಚಿವರು ಮಾತ್ರ ಸರ್ಕಾರವನ್ನ ಸಮರ್ಥಿಸಿಕೊಂಡರೆ ಸಾಲದು. ಶಾಸಕರು ಕೂಡ ಸಚಿವರಿಗೆ ಸಾಥ್ ನೀಡಬೇಕು. ಶಾಸಕರು ಕೂಡ ಗಟ್ಟಿಯಾಗಿ ಧ್ವನಿ ಎತ್ತಬೇಕು.
ಯಾವುದೇ ಕಾರಣಕ್ಕೂ ಏನೋ ಮಾತನ್ನಾಡಲು ಹೋಗಿ ಇನ್ನೇನೋ ಗೊಂದಲ ಆಗುವಂತೆ ಮಾಡಬೇಡಿ. ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಅನುದಾನದ ಪ್ರಸ್ತಾಪವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಒಂದೆರಡು ತಿಂಗಳಲ್ಲಿ ಕೈ ಶಾಸಕರಿಗೆ ತಲಾ 25 ಕೋಟಿ ಅನುದಾನವನ್ನು ಬಿಡುಗಡೆಗೊಳಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಡಿಸೆಂಬರ್ ಇಲ್ಲವೇ ಜನವರಿಯಲ್ಲಿ ಅನುದಾನ ನೀಡಲಾಗುವುದು.
ಕ್ಷೇತ್ರಗಳ ಕೆಲಸ ಕಾರ್ಯಗಳಿಗೆ ಅನುದಾನ ಸಿಗಲಿದೆ. ಅನುದಾನ ಇಲ್ಲಾ ಅಂತಾ ಯಾರೂ ಅಸಮಾಧಾನ ವ್ಯಕ್ತಪಡಿಸುವುದು ಬೇಡ ಎಂದು ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.


