ಕೊರಟಗೆರೆ ತಾಲೂಕಿನ ನವಿಲುಕುರಿಕೆ ಗ್ರಾಮಸ್ಥರು ನಿವೇಶನ ಹಾಗೂ ಸ್ಮಶಾನಕ್ಕಾಗಿ ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ. ನಿರಾಶ್ರಿತರಿಗೆ ಮೀಸಲಿಟ್ಟ ನಿವೇಶನ ಜಾಗವನ್ನು ಖಾಸಗಿಯವರು ಅತಿಕ್ರಮ ಮಾಡುತ್ತಿದ್ದಾರೆ. ಇದರಿಂದಾಗಿ ಸ್ಮಶಾನಕ್ಕೆ ಜಾಗವಿಲ್ಲದೆ ಸಾರ್ವಜನಿಕರು, ಪರಿತಪಿಸುತ್ತಿದ್ದಾರೆ.
ಇದೇ ವೇಳೆ, ತಹಶೀಲ್ದಾರ್ ಮಂಜುನಾಥ್ ನಿವೇಶನ ಹಾಗೂ ಸ್ಮಶಾನ ಜಾಗ ತ್ವರಿತವಾಗಿ ನೀಡುವ ಭರವಸೆ ನೀಡಿದ ಬಳಿಕ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಸಾರ್ವನಿಕರು ಗ್ರಾಮಕ್ಕೆ ಹಿಂದುರುಗಿದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ


