SC-ST ಸಮುದಾಯಕ್ಕೆ ಮೀಸಲಿದ್ದ SCSP-TSP ಹಣವನ್ನು ಗ್ಯಾರಂಟಿ ಯೋಜನಗೆ ಬಳಸಿಕೊಂಡ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ದೊಡ್ಡ ಗಲಾಟೆ ನಡೆದಿದೆ. ಬಿಜೆಪಿ-ಕಾಂಗ್ರೆಸ್ ನಡುವೆ ಗದ್ದಲ ಗಲಾಟೆಗೆ ಸಾಕ್ಷಿ ಆಗಿದೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ನಾರಾಯಣಸ್ವಾಮಿ ಪ್ರಶ್ನೆ ಕೇಳಿದ್ರು. ಸರ್ಕಾರ ಗ್ಯಾರಂಟಿ ಯೋಜನೆಗೆ SCSP-TSP ಹಣ ಬಳಕೆ ಮಾಡಿದೆ. ನಮ್ಮ ಹಣ ಬಳಕೆ ಮಾಡಿದ್ದು ತಪ್ಪು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ 7D ತೆಗೆಯೋದಾಗಿ ಹೇಳಿದ್ರು. ಆದರೆ 7D ರದ್ದು ಮಾಡಿಲ್ಲ. 11,500 ಕೋಟಿ ರೂ. SCSP-TSP ಹಣವನ್ನು ಗ್ಯಾರಂಟಿಗೆ ಕೊಡಲಾಗಿದೆ. ದಲಿತರ ಹಣ ಯಾಕೆ ಎಲ್ಲರಿಗೂ ಕೊಡ್ತಿದ್ದೀರಾ? ಶಕ್ತಿ ಯೋಜನೆಯಲ್ಲಿ ಹೇಗೆ ದಲಿತರಿಗೆ ಹಣ ಬಿಡುಗಡೆ ಆಗುತ್ತೆ? ಜಾತಿ ನೋಡಿ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆ ಕೊಡ್ತೀರಾ. SCSP-TSP ಹಣ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳಬಾರದು ಅಂತ ಆಗ್ರಹಿಸಿದರು.
ಇದಕ್ಕೆ ಸಚಿವ ಮಹದೇವಪ್ಪ ಉತ್ತರ ನೀಡಿ, 2013-14 ರಲ್ಲಿ SCSP-TSP ಹಣ ಬಳಕೆ ಮಾಡಿಕೊಳ್ಳಬಾರದು ಅನ್ನೋ ನಿಯಮ ಸಿದ್ದರಾಮಯ್ಯ ಅವರೇ ಜಾರಿ ಮಾಡಿದ್ರು. 7C, 7D, 7A, 7B ಅಂತ ನಿಯಮ ಆಗಿದೆ. ಇದರ ಅನ್ವಯ SC-ST ಜನರಿಗೆ ಹಣ ಹೋಗುತ್ತಿದೆ. 7C ನಿಯಮದ ಅನ್ವಯ ಗ್ಯಾರಂಟಿ ಯೋಜನೆಗೆ ಹಣ ಬಳಕೆ ಮಾಡಲಾಗಿದೆ. 7D ನಿಯಮವನ್ನು ನಿನ್ನೆಯ ಕ್ಯಾಬಿನೆಟ್‌ನಲ್ಲಿ ರದ್ದು ಮಾಡಲಾಗಿದೆ. ಮೊದಲು 7D ನಿಯಮದಲ್ಲಿ ಹಣ ದುರ್ಬಳಕೆ ಆಗಗುತ್ತಿತ್ತು. ಹೀಗಾಗಿ 7D ರದ್ದು ಮಾಡಲಾಗಿದೆ. SCSP-TSP ಹಣ ಅನ್ಯ ಉದ್ದೇಶಕ್ಕೆ ಬಳಕೆ ಆಗೊಲ್ಲ. 7D ರದ್ದು ಮಾಡಲಾಗಿದೆ. ಈ ಅಧಿವೇಶನದಲ್ಲಿ ಕಾಯ್ದೆ ತರುತ್ತೇವೆ ಅಂತ ತಿಳಿಸಿದರು.


