ಕೇರಳದ ದಂಪತಿಗಳು ಹಾಗೂ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕರ್ನಾಟಕದ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಕಗ್ಗೋಡ್ಲು ಗ್ರಾಮದ ರೆಸಾರ್ಟ್ ನಲ್ಲಿ ನಡೆದಿದೆ. ಮೃತರನ್ನು ವಿನೋದ್ ಬಾಬುಸೇನನ್(43) ಮತ್ತು ಜಿಬಿ ಅಬ್ರಹಾಂ (38) ಮತ್ತು 11 ವರ್ಷದ ಮಗಳು ಜೇನ್ ಮರಿಯಾ ಜಾಕೋಬ್ ಎಂದು ಗುರುತಿಸಲಾಗಿದೆ.
ಪೊಲೀಸ್ ವರದಿಗಳ ಪ್ರಕಾರ ಮೃತ ಕುಟುಂಬವು ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಶುಕ್ರವಾರ ಸಂಜೆ ರೆಸಾರ್ಟ್ ಗೆ ಮೃತರು ಆಗಮಿಸಿದ್ದು ನಂತರ ಕುಟುಂಬವು ನಿಗದಿ ಪಡಿಸಿದ ಸಮಯಕ್ಕೆ ಚೆಕ್-ಔಟ್ ಮಾಡದೆ ಇದ್ದಾಗ ಅನುಮಾನಗೊಂಡು ರೆಸಾರ್ಟ್ ಸಿಬ್ಬಂದಿಗಳು, ದಂಪತಿಗಳು ಉಳಿದುಕೊಂಡಿದ್ದ ಕೋಣೆಯ ಕಿಟಕಿಯ ಮೂಲಕ ಇಣುಕಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
ವಿಷಯ ತಿಳಿದ ಪೋಲಿಸರು ಸ್ಧಳಕ್ಕಾಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮೃತ ವ್ಯಕ್ತಿಗಳ ಸಂಬಂಧಿಕರಿಗೆ ಮಾಹಿತಿ ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.


