ಗದಗ: ವಿದ್ಯೆ ಕಲಿಸುವ ಶಿಕ್ಷಕನ ಕ್ರೂರತನಕ್ಕೆ ವಿದ್ಯಾರ್ಥಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಸಹಪಾಠಿಯೊಂದಿಗೆ ಮಾತನಾಡುವಾಗ ಏಕಾಏಕಿ ಬಂದ ಶಿಕ್ಷಕ, ಮೃಗೀಯವಾಗಿ ವಿದ್ಯಾರ್ಥಿಗೆ ಬಡಿಗೆಯಿಂದ ಹಲ್ಲೆ ಮಾಡಿ, ತಳ್ಳಿದ್ದಾನಂತೆ. ಆ ರಭಸಕ್ಕೆ ಬಿದ್ದ ವಿದ್ಯಾರ್ಥಿ ಕೈ ಎಲುಬು ಕಟ್ ಆಗಿದೆ. ಮಗನ ಸ್ಥಿತಿ ಕಂಡು ಹೆತ್ತಮ್ಮ ಕಣ್ಣೀರು ಹಾಕ್ತಾ ಇದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ.
6 ನೇ ತರಗತಿ ವಿದ್ಯಾರ್ಥಿಯ ಕೈ ಮುರಿದ ಶಿಕ್ಷಕನ ಕುಕೃತ್ಯದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕ ನಟರಾಜ್ ಎನ್ನುವಾತನಿಂದ ಈ ಕೃತ್ಯ ನಡೆದಿದೆ. ಏನೂ ತಪ್ಪು ಮಾಡದೇ ಶಿಕ್ಷಕನ ಅಟ್ಟಹಾಸಕ್ಕೆ ಕೈ ಮುರಿದುಕೊಂಡು ವಿದ್ಯಾರ್ಥಿ ನೋವನ್ನು ಅನುಭವಿಸುತ್ತಿದ್ದಾನೆ.
ಮಲ್ಲಯ್ಯ ಬಲಗೈ ಮುರಿದು ಹೋಗಿದೆ ಅಂತ ಹೆತ್ತವರರು ಆರೋಪಿಸಿದ್ದಾರೆ. ಘಟನೆ ಬಳಿಕ ಕೂಡಲೇ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲುಬು ಕಟ್ ಆಗಿರೋದರಿಂದ ವೈದ್ಯರ ಸಲಹೆಯಂತೆ ಆಪರೇಷನ್ ಕೂಡಾ ಮಾಡಿದ್ದಾರೆ. ಆಪರೇಷನ್ ಖರ್ಚು ವೆಚ್ಚ ನೀಡಿ ಶಿಕ್ಷಣ ಸಂಸ್ಥೆ ಕೈತೊಳೆದುಕೊಂಡಿದೆ ಎಂದು ವಿದ್ಯಾರ್ಥಿಯ ಪೋಷಕರು ದೂರಿದ್ದಾರೆ.


