ಬೆಳಗಾವಿ ತಾಲೂಕಿನ ಹೊಸ ಹೊಂಟುಮುರಿ ಎಲ್ಲಿ ನಡೆದ ಘಟನೆ ಕುರಿತು ಬಿಜೆಪಿ ಕೇಂದ್ರ ಸಂಸದೀಯ ಮಹಿಳಾ ನಿಯೋಗ ಬೆಳಗಾವಿ ತಾಲೂಕಿನ ಹೊಂಟ್ಮುರಿಯಲ್ಲಿ ನಡೆದ ಘಟನೆಯ ಕುರಿತು ಸತ್ಯಶೋಧನೆಗಾಗಿ ಸಂಸದರಾದ ಅಫ್ರಜಿತಾ ಸಾರಂಗಿ, ಸುನಿತಾ ದಂಗ್ಗಲ, ಲಾಕೆಟ್ ಚಟರ್ಜಿ ರಂಜಿತಾ ಕೋಲಿ, ಆಶಾ ಲಾಕ್ರ ,ನೇತೃತ್ವದ ನಿಯೋಗ ಬೆಳಗಾವಿಗೆ ಆಗಮಿಸಿದ್ದು ಸಂತ್ರಸ್ತ ಮಹಿಳೆಯನ್ನು ಬೀಮ್ಸ ಆಸ್ಪತ್ರೆಯಲ್ಲಿ ನಿಯೋಗ. ಭೇಟಿಯಾಗಿದೆ.
ನಿಯೋಗದ ಸದಸ್ಯರ ಅಫ್ರಜಿತಾ ಸಾರಂಗಿ ಹಾಗೂ ಲಾಕೆಟ್ ಚಟರ್ಜಿ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಅಮಾನವೀಯ ಘಟನೆ ಈ ಘಟನೆಯನ್ನು ನಾವು ಖಂಡಿಸುತ್ತೇವೆ ಕಾಂಗ್ರೆಸ್ ಸರ್ಕಾರದ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿರುವುದು ಇದೊಂದು ಉದಾಹರಣೆವಾಗಿದೆ ಎಂದು ದೂರಿದರು.
ಬೆಳಗಾವಿಯಲ್ಲಿ ಸರ್ಕಾರದ ಅಧಿವೇಶನ ನಡೆಯುತ್ತಿರುವಾಗ ಇಂಥದೊಂದು ಘಟನೆ ನಡೆದಿರುವುದು ಅಮಾನವೀಯ ಕೃತ್ಯವಾಗಿದೆ. ಇದಕ್ಕೆ ಸೂಕ್ತವಾದ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ . ಸಿದ್ದರಾಮಯ್ಯ ಸರ್ಕಾರ ಮಹಿಳೆಯರ ರಕ್ಷಣೆ ಮಾಡುವುದರಲ್ಲಿ ವಿಫಲವಾಗಿದೆ ಎಂದು ಇದೇ ವೇಳೆ ಟೀಕಿಸಿದರು.
ಇನ್ನೂ ಇಂಥದೊಂದು ಘಟನೆ ಮಣಿಪುರ್, ಉತ್ತರ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ನಡೆದಾಗ ಇಂತದೊಂದು ನಿಯೋಗ ಯಾಕೆ ಹೋಗಿಲ್ಲ ಎಂಬ ಪ್ರಶ್ನೆಗೆ ನಿಯೋಗ ಉತ್ತರ ನೀಡಲು ನಿಯೋಗ ನಿರಾಕರಿಸಿ ಸ್ಥಳದಿಂದ ತೆರಳಿತು.
ನಿಯೋಗದ ಜೊತೆ ಬೆಳಗಾವಿ ಸಂಸದೆ ಮಂಗಳ ಸುರೇಶ್ ಅಂಗಡಿ, ನಿಪ್ಪಾಣಿ ಶಾಸಕಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಬಿಜೆಪಿ ಮಹಿಳಾ ಮುಖಂಡರು ಉಪಸ್ಥಿತರಿದ್ದರು.


