ಬೆಂಗಳೂರು: ಯಾವ ದೇವರು ಮತ್ತು ಧರ್ಮ ನಮ್ಮನ್ನು ಉದ್ಧಾರ ಮಾಡುವುದಿಲ್ಲ, ಶಿಕ್ಷಣ ಹಾಗೂ ನಮ್ಮ ಸ್ವಯಂ ಪರಿಶ್ರಮದಿಂದಲೇ ನಮ್ಮ ಉದ್ಧಾರ ಸಾಧ್ಯ ಎಂಬ ಬಾಬಾ ಸಾಹೇಬರ ಮಾತುಗಳನ್ನು ನಾವು ಎಂದಿಗೂ ಮರೆಯಬಾರದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದು ವೇಳೆ ಅವರ ಮಾತನ್ನು ನಾವು ಮರೆತರೆ ರಾಜಕೀಯ ಕಾರಣಕ್ಕಾಗಿ ಇವರು ಮಂದಿರ ಮಸೀದಿಗಳೇ ಪ್ರಮುಖವೆಂದು ವಾದಿಸುತ್ತಾ, ಅದರೊಳಗೆ ಶೋಷಿತ ಸಮುದಾಯ ಪ್ರವೇಶ ಮಾಡದಂತೆ ಹುನ್ನಾರ ರೂಪಿಸುತ್ತವೆ ಎಂದರು.
ರಾಜ್ಯದ ಶಾಲೆ ಹಾಗೂ ಹಾಸ್ಟೆಲ್ ಸ್ಥಿತಿಗತಿ ಅರಿಯಲು ವಿಚಕ್ಷಣ ದಳ ರಚನೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌ಸಿ ಮಹದೇವಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಸತಿ ಶಾಲೆಗಳನ್ನು ಶಿಸ್ತುಬದ್ಧವಾಗಿ ಮತ್ತು ಶಿಕ್ಷಣದ ಆಶಯಕ್ಕೆ ಅನುಗುಣವಾಗಿ ನಿರ್ವಹಣೆ ಮಾಡಲು ಬೇಕಾದ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ ಎಂದರು.
ಇನ್ನು ಮುಂದೆ ಶಾಲೆ ಹಾಗೂ ಹಾಸ್ಟೆಲ್ ಗಳ ಹಂತದಲ್ಲಿ ವಿಚಕ್ಷಣ ದಳವನ್ನು ರಚಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು.


