ಲೋಕಸಭೆಯಲ್ಲಿ ಭದ್ರತಾ ವೈಫಲ್ಯ ಸಂಬಂಧ ನಿಮಗೂ ಮನೋರಂಜನ್ ಗೂ ಲಿಂಕ್ ಏನು ..? ಪ್ರಕರಣದಲ್ಲಿ ನಿಮ್ಮ ಪಾತ್ರವೇನು ಅಂತ ಹೇಳಿ ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನೆಗಳ ಸುರಿಮಳೆಗೈದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ನಿಮಗೆ ಜನ ಈ ಬಾರಿ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತಾರೆ. ಜನರಿಗೆ ನಿಮ್ಮ ಬಿಜೆಪಿ ಬುದ್ದಿ ಎಲ್ಲಾ ಗೊತ್ತಾಗಿದೆ. ತಾಯಿ ಚಾಮುಂಡೇಶ್ವರಿ ಮೇಲೆ ಭಕ್ತಿ ಇದ್ದರೆ ನಿಮ್ಮ ಕೇಂದ್ರದ ವೀಕ್ಷಕರು ಮಾಡಿರುವ ವರದಿಯಲ್ಲಿ ಏನಿದೆ ಅಂತ ಹೇಳಿ. ನೀವು ಎಷ್ಟು ವೋಟ್ ಗಳಲ್ಲಿ ಸೋಲುತ್ತೀರಿ ಅಂತನೂ ಹೇಳಿ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಪ್ರತಾಪ್ ಸಿಂಹ ನಾನೇನಾದರೂ ತಪ್ಪು ಮಾಡಿದರೇ ಚಾಮುಂಡೇಶ್ವರಿ ನೋಡಿ ಕೊಳ್ತಾರೆ. ನನ್ನ ಕ್ಷೇತ್ರದ ಜನ ನೋಡಿಕೊಳ್ಳುತ್ತಾರೆ ಅಂತ ಹೇಳಿದ್ದಾರೆ. ಹೋಗಲಿ ನಿಮಗೂ ಮನೋರಂಜನ್ ಗೂ ಏನು ಲಿಂಕ್ ಇದೆ ಅಂತ ಹೇಳಿ? ಬೇರೆ ಏನೂ ಬೇಡ. ಮನೋರಂಜನ್ ಗೆ ನೀವು ಆನ್ ಲೈನ್ ಮೂಲಕ ಎಲ್ಲಿ ಹೇಗೆ ಎಷ್ಟು ಹಣ ಕಳಿಸಿಕೊಟ್ಟಿದ್ದೀರಿ ಅಂತ ಹೇಳಿ. ಪ್ರಕರಣದಲ್ಲಿ ನಿಮ್ಮ ಪಾತ್ರ ಏನು ಇಲ್ವಾ ಅಂತ ಹೇಳಿ ? ಎಂದು ಪ್ರತಾಪ್ ಸಿಂಹ ಅವರಿಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಪ್ರಶ್ನೆಗಳ ಸುರಿಮಳೆಗೈದರು.
ದಶಪಥ ಹೆದ್ದಾರಿ ಕಾಮಗಾರಿಯಲ್ಲಿ ನೀವು ನೂರು ಕೋಟಿಗೂ ಅಧಿಕವಾಗಿ ಕಮಿಷನ್ ಹೊಡೆದಿದ್ದೀರಿ ಅಂತ ಜನ ಹೇಳುತ್ತಿದ್ದಾರೆ. ನೀವು ನಿಮ್ಮ ಕಾಲಾವಧಿಯಲ್ಲಿ ಏನು ಕೆಲಸ ಮಾಡಿದ್ದೀರಿ ಅಂತ ಒಂದು ಶ್ವೇತ ಪತ್ರ ಹೊರಡಿಸಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.


