ಜಾತಿಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಿ ಎರಡು ಸದನಗಳಲ್ಲಿ ಮಂಡಿಸಲಿ ಎಂದು ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಸರ್ಕಾರಕ್ಕೆ ಆಗ್ರಹಿಸಿದೆ.
ಜಾತಿಗಣತಿ ವಿಷಯದಲ್ಲಿ ಕೆಲವು ಸಮುದಾಯಗಳು ಅಪಸ್ವರ ಎತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಜಾತಿಯ ಗಣತಿ ವರದಿಯನ್ನು ಸ್ವೀಕಾರ ಮಾಡಬೇಕು ಹಾಗೂ ಎರಡು ಸದನಗಳಲ್ಲಿ ಮಂಡಿಸಿ ಚರ್ಚೆ ಮಾಡಬೇಕು ಎಂದು ಒತ್ತಾಯಿಸಿತು.
ನಿವೃತ್ತ ಐಎಎಸ್ ಅಧಿಕಾರಿ ಜಾಗತಿಕ ಲಿಂಗಾಯತ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ್ ಜಮಾದಾರ ಮಾತನಾಡಿ, 2014ರಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ಬಜೆಟ್ ದಿಂದ 160 ಕೋಟಿಗಳನ್ನು ಮೀಸಲಿಟ್ಟು ಈ ವರದಿಯನ್ನು ಸಿದ್ಧಪಡಿಸಿತ್ತು. ಆದರೆ 8 ವರ್ಷಗಳ ಕಾಲ ಈ ವರದಿ ಸರ್ಕಾರ ಸ್ವೀಕರಿಸದೆ ಇರಲು ಕಾರಣವೇನು ಇದನ್ನು ಕೂಡಲೇ ಸ್ವೀಕರಿಸಬೇಕು ಹಾಗೂ ಸದನಗಳಲ್ಲಿ ಚರ್ಚೆ ಆಗಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾ ಒತ್ತಾಯ ಮಾಡುತ್ತದೆ ಎಂದರು.
ಇಲ್ಲಿವರೆಗೆ ಸ್ವೀಕರಿಸದೆ ಇರುವ ಕಾರಣ ಇದರ ಹಿಂದೆ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಖಿಲ ಭಾರತ ವೀರಶೈವ ಮಹಾಸಭೆಯ 24ನೇ ಅಧಿವೇಶನದಲ್ಲಿ 8 ನಿರ್ಣಯಗಳನ್ನ ಸ್ವೀಕರಿಸಿದೆ ಅವುಗಳಲ್ಲಿ 7 ಪ್ರಮುಖ ನಿರ್ಣಯಗಳನ್ನು ಜಾಗತಿಕ ಲಿಂಗಾಯತ ಮಹಾಸಭೆ ಬೆಂಬಲಿಸುತ್ತದೆ ಮತ್ತು ಅದಕ್ಕಾಗಿ ವೀರಶೈವ ಮಹಾಸಭೆಯನ್ನು ಅಭಿನಂದಿಸುತ್ತದೆ. 7 ನಿರ್ಣಯಗಳಲ್ಲಿ ಲಿಂಗಾಯತರು ಹಿಂದುಗಳಲ್ಲ ಆದ್ದರಿಂದ ಮುಂಬರುವ ಜನಗಣತಿಯಲ್ಲಿ ಲಿಂಗಾಯತರು ತಮ್ಮ ಧರ್ಮವನ್ನು ಹಿಂದು ಎಂಬ ಭರಿಸಬಾರದು ಅದಕ್ಕೆ ಬದಲಾಗಿ ಲಿಂಗಾಯತ ವೀರಶೈವ ಎಂದು ಭರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ಬಿ.ಎಸ್.ಯಡಿಯೂರಪ್ಪನವರು ಲಿಂಗಾಯಿತರು ಹಿಂದುಗಳಲ್ಲ ಎಂಬುವುದು ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ನಿರ್ಣಯಕ್ಕೆ ಬದ್ಧರಾಗಿದ್ದಾರೆ ? ಅಥವಾ ಇಲ್ಲ ಎಂಬುದು ತಮ್ಮ ನಿಲುವುವನ್ನು ಸ್ಪಷ್ಟಪಡಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಈ ವಿಷಯದಲಿ ಅವರನ್ನು ಆಗ್ರಹಿಸುತ್ತದೆ ಮತ್ತು ತಮ್ಮ ನಿಲುವು ಬಹಿರಂಗಪಡಿಸಬೇಕೆಂದು ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ್ ರೊಟ್ಟಿ ಜಾಗತಿಕ ಲಿಂಗಾಯತ ಮಹಾ ಸಭೆಯ ಬೆಳಗಾವಿ ಜಿಲ್ಲಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.


