ಪಾವಗಡ ತಾಲ್ಲೂಕಿನ ನಿಡಗಲ್ಲು ಹೋಬಳಿಯ ಗೊಲ್ಲನಕುಂಟೆ ಆಂಜನೇಯ ಸ್ವಾಮಿ ದೇವಸ್ಥಾನದ ಸೇವಾ ಸಮಿತಿಯ ವತಿಯಿಂದ ಇತ್ತೀಚೆಗೆ ಅದ್ಧೂರಿಯಾಗಿ ಹನುಮ ಜಯಂತಿ ಉತ್ಸವ ಆಚರಣೆ ಮಾಡಲಾಯಿತು.
ಉತ್ಸವದಲ್ಲಿ ಭಾಗಿಯಾಗಿದ್ದ ಹನುಮ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಉತ್ಸವದಲ್ಲಿ ಸರಿಸುಮಾರು 2,500 ಭಕ್ತಾದಿಗಳು ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದರು.
ಈ ಒಂದು ಉತ್ಸವದಲ್ಲಿ ಗೊಲ್ಲನಕುಂಟೆ ವ್ಯಾಪ್ತಿಯ ಎಸ್.ಆರ್. ಪಾಳ್ಯ ಗ್ರಾಮದ ಅರ್ಚಕರಾದ ನಾರಾಯಣ್ ರಾವ್, ಮಾಜಿ ಚೇರ್ಮಾನ್ ಬೀರಲಿಂಗಪ್ಪ, ತ್ಯಾಗರಾಜು, ನಿವೃತ್ತ ದೈಹಿಕ ಶಿಕ್ಷಕರಾದ ಹನುಮಂತರಾಯ, ಗುಜ್ಜಾರಹಳ್ಳಿ ಗ್ರಾಮದ ಬಸವರಾಜು, ಸಣ್ಣೀರಪ್ಪ, ವೀರಭದ್ರಪ್ಪ ಮತ್ತು ಕದಿರೆಹಳ್ಳಿಯ ಕೆ ಜಿ ಕರಿಯಣ್ಣ, ಹನುಮಂತರಾಯಪ್ಪ, ನರಸಿಂಹಪ್ಪ, ಆನಂದಪ್ಪ ಹಾಗೂ ಮೂರು ಗ್ರಾಮಗಳ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ


