ಕರ್ನಾಟಕ ರಾಜ್ಯದ ಗ್ರಾಹಕರ ವ್ಯಾಜ್ಯ ಗಳ ಪರಿಹಾರ ಖಾಯಂ ಪೀಠವನ್ನು ಬೆಳಗಾವಿ ಯಲ್ಲಿ ಪ್ರಾರಂಭಿಸಬೇಕು ಎಂದು ಅಹಿಂದ ನ್ಯಾಯವಾದಿಗಳ ಸಂಘ ಬೆಳಗಾವಿ ಎನ್ ಆರ್ ಲಾತೂರ್ ಅವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗಳ ಆವರಣದಲ್ಲಿ ಧರಣಿ ಸತ್ಯಾಗ್ರಹ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯವಾದಿ ಲಾತೂರವರು ಬೆಳಗಾವಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಗಳಪರಿಹಾರ ಖಾಯಂ ಪೀಠವನ್ನು ಬೆಳಗಾವಿಯಲ್ಲಿ ಪ್ರಾರಂಭಿಸಬೇಕು. ಕಳೆದ ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ ಮತ್ತು ಈಗಾಗಲೇ ಬೆಳಗಾವಿಯಲ್ಲಿ ಸ್ಥಾಪನೆ ಮಾಡಲಾಗಿದೆ ಆದರೆ ಇನ್ನೂ ಕಾರ್ಯ ಆರಂಭವಾಗಿರುವುದಿಲ್ಲ. ಅದಕ್ಕಾಗಿ ತಕ್ಷಣವೇ ಕರ್ನಾಟಕ ಸರ್ಕಾರ ರಾಜ್ಯ ಗ್ರಾಹಕರ ವ್ಯಾಜ್ಯಗಳನ್ನು ಪರಿಹಾರ ಆಯೋಗ ಪೀಠ ಪ್ರಾರಂಭ ಮಾಡಬೇಕು.
ಬೆಳಗಾವಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಠೇವಣಿದಾರರು ಖಾಸಗಿ ಸಹಕಾರಿ ಸಂಸ್ಥೆಗಳು ಹಣ ಠೇವಣಿ ಮಾಡಿರುತ್ತಾರೆ. ಆದರೆ ಸಹಕಾರಿ ಹಾಗೂ ಸೌಹಾರ್ದದ ಸೊಸೈಟಿಗಳು ವಂಚನೆ ಮಾಡಿರುತ್ತಾರೆ. ಇಂತಹ ಪ್ರಕರಣಗಳಿಗೆ ನ್ಯಾಯ ಸಿಗಲು ವಿಳಂಬ ಹಾಗೂ ನ್ಯಾಯ ಪಡೆಯಲು ಬೆಂಗಳೂರಿಗೆ ಹೋಗಬೇಕಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಉತ್ತರ ಕರ್ನಾಟಕದ ಭಾಗದ ಜನತೆಗೆ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಪೀಠವನ್ನು ಬೆಳಗಾವಿಗೆ ಆದಷ್ಟು ಬೇಗ ಪ್ರಾರಂಭಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಇವರಿಗೆ ಜಿಲ್ಲಾಧಿಕಾರಿಗಳು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವರಿ ಸಚಿವರುಗಳಿಗೆ ಈ ವಿಷಯವನ್ನು ತಲುಪಿಸಿದ್ದು ಇನ್ನುವರಿಗೆ ಯಾವುದೇ ಪ್ರತಿಕ್ರಿಯ ನಮಗೆ ಸಿಕ್ಕಿಲ್ಲ ಆದ್ದರಿಂದ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಖಾಯಂ ಪೀಠವನ್ನು ಸ್ಥಾಪಿಸುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಎಲ್ಲಿಯವರೆಗೆ ಪೀಠ ಸ್ಥಾಪಿಸುವುದಿಲ್ಲ ಅಲ್ಲಿವರೆಗೆ ನಿರಂತರ ಧರಣಿ ಸತ್ಯಾಗ್ರ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಮಲ್ಲೇಶ ಚೌಗಲಾ ಧರನಿ ಸತ್ಯಾಗ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರಾಮಚಂದ್ರಗೌಡ ಬಗನಾಳಕರ, ಲಕ್ಷ್ಮಣ್ ಕೊಲ್ಕರ, ಧರ್ಮ ಕುರಲ, ರಾಜೇಂದ್ರ ಶೆಟ್ಟನ್ನವರ, ಮುಂತಾದವರು ಉಪಸ್ಥಿರಿದ್ದರು.


