ಬೆಳಗಾವಿ: ತಾಲೂಕಿನ ಮುತಗಾ ಗ್ರಾಮ ಪಂಚಾಯತ್ ಅಡಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ ಎಂದು ಅಸಮಾಧಾನಗೊಂಡ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ಯಾಮ್ ಗಂಗಾಧರ್ ಮುತಗೆಕರ ರಾಜೀನಾಮೆಯನ್ನು ಸಲ್ಲಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಪಂಚಾಯಿತಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು.
ಉಪಾಧ್ಯಕ್ಷರು ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ಜನರಿಗೆ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೀರಾ ದೇಶಪಾಂಡೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತನ ಇದಕ್ಕೆ ಕಾರಣ ಎಂದು ಅಸಮಾದಾನಗೊಂಡ ಉಪಾಧ್ಯಕ್ಷರು ರಾಜೀನಾಮೆ ನೀಡಲು ಮುಂದಾಗಿದ್ದರು. ಕೆಲ ಹೊತ್ತು ಪಂಚಾಯತಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಈ ಸಮಸ್ಯೆಗೆ ಸ್ಪಂದಿಸಲು ಸದಸ್ಯರುಗಳಾದ ಬಾಲಚಂದ್ರ, ಶ್ರೀಕಾಂತ ಪಾಟೀಲ ಹಾಗೂ ರವಿ ಕೋಟಬಾಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಿರಣ ಕಲ್ಲಪ್ಪ ಪಾಟೀಲ್ ಉಪಾಧ್ಯಕ್ಷರಾದ ಶ್ಯಾಮ್ ಮುತ್ತೆಗೆಕರ ಅವರನ್ನು ಸಮಾಧಾನಪಡಿಸಿ ಮುತಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿವಾಡದಲ್ಲೂ ಕೆಲಸ ಕಾರ್ಯ ಮಾಡಲು ನಾವು ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ. ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಬೇಗನೆ ಸಭೆ ಕರೆದು ಅಭಿವೃದ್ಧಿ ಕಾಮಗಾರಿಗಳಿಗೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರುಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರುಗಳ ರಾಜೀನಾಮೆ ವಾಪಸ್ ತೆಗೆದುಕೊಳ್ಳಬೇಕು ಅಭಿವೃದ್ಧಿ ಕಾಮಗಾರಿಗಳ ಸಲುವಾಗಿ ಜನ ನಮ್ಮನ್ನು ಪಂಚಾಯತಿಗೆ ಚುನಾಯಿಸಿ ಕಳಿಸಿದ್ದಾರೆ ಅವರ ವಿಶ್ವಾಸ ಮತ್ತು ಅವರು ಭರವಸೆಯನ್ನು ಕಾಯ್ದುಕೊಳ್ಳಬೇಕಾಗಿರುವ ಜವಾಬ್ದಾರಿ ನಮ್ಮದಾಗಿದೆ ಎಂದರು. ಈ ಸಂದರ್ಭದಲ್ಲಿ ರವಿ ಕೋಟಬಾಗಿ ಬಾಲಚಂದ್ರ ಪಾಟೀಲ್ ಕಿರಣ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.


