nammatumakuru

    Subscribe to Updates

    Get the latest creative news from FooBar about art, design and business.

    What's Hot

    ವೀರಾಂಜನೇಯ ಸ್ವಾಮಿ ದೇವಾಲಯದ ಹುಂಡಿ ಕಳವು:  ದೂರು ದಾಖಲು

    May 5, 2026

    ಹೋಂಸ್ಟೇ: ಅಧಿಕೃತ ನೋಂದಣಿಗೆ ಸೂಚನೆ

    May 5, 2026

    ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

    May 5, 2026
    Facebook Twitter Instagram
    ಟ್ರೆಂಡಿಂಗ್
    • ವೀರಾಂಜನೇಯ ಸ್ವಾಮಿ ದೇವಾಲಯದ ಹುಂಡಿ ಕಳವು:  ದೂರು ದಾಖಲು
    • ಹೋಂಸ್ಟೇ: ಅಧಿಕೃತ ನೋಂದಣಿಗೆ ಸೂಚನೆ
    • ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
    • ಪತ್ನಿಯ ಭೀಕರ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ
    • ಗುಬ್ಬಿ: ಮೇ 25ರಂದು ಬಸವ ಜಯಂತಿ ಆಚರಣೆ
    • ಹಜ್ ಯಾತ್ರಿಕರ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತಿರಲಿ: ವಿಮಾನಯಾನಕ್ಕೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಕರೆ
    • ಸರ್ಕಾರಿ ಶಾಲೆ ಉಳಿಸುವ ಸಂಕಲ್ಪದೊಂದಿಗೆ: ಮಕ್ಕಳ ಬೇಸಿಗೆ ಶಿಬಿರ
    • ಬಾತುಕೋಳಿ ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವು, ಓರ್ವನ ಸ್ಥಿತಿ ಗಂಭೀರ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಾಲಗಂಗಾಧರನಾಥ ಸ್ವಾಮೀಜಿಯವರ 11ನೇ ಪುಣ್ಯಾರಾಧನಾ ಸಮಾರಂಭ
    ರಾಜ್ಯ ಸುದ್ದಿ January 17, 2024

    ಬಾಲಗಂಗಾಧರನಾಥ ಸ್ವಾಮೀಜಿಯವರ 11ನೇ ಪುಣ್ಯಾರಾಧನಾ ಸಮಾರಂಭ

    By adminJanuary 17, 2024No Comments2 Mins Read
    thipatooru 3

    ತಿಪಟೂರು: ಸಾಮಾಜಿಕ ಕೆಳಸ್ತರದ ವರ್ಗದಿಂದ ಉನ್ನತ ವರ್ಗದವರಿಗೂ ಸರ್ವ ರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿಕೊಟ್ಟು, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿಯೂ ತನ್ನದೇ ಆದ ವಿಶಿಷ್ಟ ಸೇವೆಗಳ ಮೂಲಕ ಸಾಮರಸ್ಯವನ್ನು ಮೂಡಿಸಿದ ಬಾಲಗಂಗಾಧರನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ ಎಂದು ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

    ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ, ಆದಿಚುಂಚನಗಿರಿಯ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 11ನೇ ಪುಣ್ಯಾರಾಧನಾ ಸಮಾರಂಭ ಹಾಗೂ 50ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಬಾಲಗಂಗಾಧರನಾಥ ಸ್ವಾಮೀಜಿಯವರ ಸಾಮಾಜಿಕ ಕಾಳಕಳಿ ಕಾರಣದಿಂದಲೇ, ಜಗತ್ತಿನಾದ್ಯಂತ ಚಿರಸ್ಮರಣಿಯಾಗಿದ್ದು, ಸಮಾಜಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕøತಿಕ ಪ್ರಗತಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಎಲ್ಲಾ ವರ್ಗದ ಜನಸಾಮಾನ್ಯರಿಗೆ ದಾರಿ ದೀಪವಾಗಿ ಪ್ರಜ್ವಲಿಸುತ್ತಿದ್ದಾರೆ.


    Provided by
    Provided by

    ಸ್ವಾಮೀಜಿಯವರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿದ್ದಕ್ಕೆ ಸಾಕ್ಷಿಯಾಗಿ “ಕರ್ನಾಟಕ ವನಸಂವರ್ಧನ ಟ್ರಸ್ಟ್” ಪ್ರಾರಂಭಿಸಿ ರಾಜ್ಯದಾದ್ಯಂತ ಕೋಟ್ಯಾಂತರ ಸಸಿ ನಡೆಸುವ ಕಾರ್ಯಕ್ರಮವನ್ನು ಜಾರಿಗೆ ತಂದು, ಯಶಸ್ವಿಯಾಗಿ ಇತರರಿಗೆ ಪ್ರೇರಣೆಯಾದರು. ಅದ್ದರಿಂದ ಪ್ರತಿಯೊಬ್ಬರು ಸ್ವಾಮೀಜಿಯವರ ಚಿಂತನೆ, ಆದರ್ಶಗಳನ್ನು ಅರಿತು ನಡೆಯಬೇಕಿದೆ ಎಂದರು.

    ಹಾಸನದ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣ ತೋಂಟಾದಾರ್ಯಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡುತ್ತಾ ಶಿಕ್ಷಣ, ಧಾರ್ಮಿಕ ಚಿಂತನೆ, ಸಾಮಾಜಿಕ ಸೇವಾ ಮನೋಭಾವದಿಂದ ವಿಶ್ವದಲ್ಲಿಯೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದು ಸ್ವಾಮೀಜಿಯವರ ಕಾರ್ಯಕ್ಕೆ ಸಾಟಿ ಮತ್ತೊಂದಿಲ್ಲ. ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದಂತಹ ವಿಶಿಷ್ಟ ಯೋಜನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ, ಎಲ್ಲರೂ ಒಂದೇ ಎನ್ನುವಂತಹ ಮನೋಭಾವ ಮೂಡುವ ಸಲುವಾಗಿ ಎಲ್ಲರನ್ನು ಗೌರವವಿಸುತ್ತಿದ್ದರು. ಪ್ರಕೃತಿಯ ವಿನಾಶದಿಂದ ಮಾನವ ಅಂತ್ಯ ಎಂಬ ಸಂದೇಶವನ್ನು ಅರಿತಿದ್ದ ಅವರು ಸಸಿಗಳನ್ನು ನೆಟ್ಟು ಪೋಷಣೆಯನ್ನು ಮಾಡುವಂತಹ ಕಾರ್ಯದಲ್ಲಿ ತೊಡಗಿದ್ದರು. ಸೇವಾ ಮನೋಭಾವಕ್ಕೆ ಉದಾಹರಣೆಯಾಗಿ, ರಾಜ್ಯದ ಮೂಲೆ ಮೂಲೆಗಳಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮುಖಾಂತರ ಉಚಿತ ಸೇವೆ, ಜ್ಞಾನ ಪ್ರಸರಣವನ್ನು ಇಂದಿಗೂ ಮಾಡುತ್ತಿರುವುದು ಶ್ಲಾಘನೀಯ ಎಂದರು.

    ಈ ಸಮಾರಂಭದಲ್ಲಿ ಗುಡಿಗೌಡರು ಕುಮಾರಸ್ವಾಮಿ, ಶ್ರೀನಿವಾಸ್, ಪಾಟೀಲ್, ಮಾಜಿ ಗ್ರಾ.ಪಂ. ಸದಸ್ಯ ಮೋಹನ್ ಕುಮಾರ್, ಜಗದೀಶ್, ರಾಮಣ್ಣಗೌಡ, ರಂಗಪ್ಪ.ಎಂ.ಸಿ., ರಂಗಪ್ಪ, ಕುಮಾರಸ್ವಾಮಿ, ಮಠದ ಸಿಬ್ಬಂದಿಗಳು ಹಾಗೂ ಭಕ್ತಾಧಿಗಳು ಇದ್ದರು.

    ವರದಿ: ಆನಂದ ತಿಪಟೂರು

    admin
    • Website

    Related Posts

    ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

    May 5, 2026

    ಹಜ್ ಯಾತ್ರಿಕರ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತಿರಲಿ: ವಿಮಾನಯಾನಕ್ಕೆ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಕರೆ

    May 5, 2026

    ಅರ್ಜುನ ಆನೆಯ ಸಮಾಧಿ ಸ್ಮಾರಕ ಮೇ 6ರಂದು ಉದ್ಘಾಟನೆ: ಸಚಿವ ಈಶ್ವರ ಖಂಡ್ರೆ

    May 4, 2026

    Comments are closed.

    Our Picks

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ವೀರಾಂಜನೇಯ ಸ್ವಾಮಿ ದೇವಾಲಯದ ಹುಂಡಿ ಕಳವು:  ದೂರು ದಾಖಲು

    May 5, 2026

    ತುಮಕೂರು: ದೇವರಾಯ ಪಟ್ಟಣದ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ದೇವರ ಹುಂಡಿ ಹೊಡೆದು ಕಳ್ಳತನ ಮಾಡಿರುವ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣಾ…

    ಹೋಂಸ್ಟೇ: ಅಧಿಕೃತ ನೋಂದಣಿಗೆ ಸೂಚನೆ

    May 5, 2026

    ಕೋಮುವಾದಿ ರಾಜಕಾರಣಕ್ಕೆ ದಕ್ಷಿಣದಲ್ಲಿ ಜಾಗವಿಲ್ಲ: ಕೇರಳ, ತಮಿಳುನಾಡು ಮತದಾರರಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

    May 5, 2026

    ಪತ್ನಿಯ ಭೀಕರ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ

    May 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.