ನವದೆಹಲಿ: ರಾಜ್ಯಸಭೆ ಚುನಾವಣೆಗೆ ಇದೀಗ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ವಿ.ಸೋಮಣ್ಣ ಅವರಿಗೆ ಟಿಕೆಟ್ ಕೈತಪ್ಪಿದೆ.
ಮಾಜಿ ಸಚಿವ ಸೋಮಣ್ಣ ಅವರ ಬದಲು ನಾರಾಯಣ ಭಾಂಡಗೆಗೆ ಟಿಕೆಟ್ ನೀಡಲಾಗಿದೆ. ಜೊತೆಗೆ ಬಿಹಾರದಲ್ಲಿ ಡಾ.ಧರ್ಮಶೀಲಾ ಗುಪ್ತಾ ಹಾಗೂ ಡಾ.ಭೀಮಸಿಂಗ್ ಸೇರಿ ಇಬ್ಬರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದೆ.
ಇನ್ನುಳಿದಂತೆ ಛತ್ತೀಸ್ ಗಢದಲ್ಲಿ ರಾಜಾ ದೇವೇಂದ್ರಪ್ರತಾಪ್ ಸಿಂಗ್, ಹರಿಯಾಣದಲ್ಲಿ ಸುಭಾಷ್ ಬಾರ್ಲಾಗೆ ಹಾಗೂ ಉತ್ತರ ಪ್ರದೇಶದಲ್ಲಿ ಆರ್.ಪಿ.ಎನ್ ಸಿಂಗ್ ಗೆ ಟಿಕೆಟ್ ನೀಡಲಾಗಿದೆ.


