ಖ್ಯಾತ ನಿರೂಪಕಿ ಅನುಶ್ರೀ ಮತ್ತು ಸಿಂಗರ್ ಜಸ್ ಕರಣ್ ಸಿಂಗ್ ಒಟ್ಟಿಗೇ ಇರುವ ಫೋಟೋಗಳನ್ನು ಗಾಯಕ ಜಸ್ಕರಣ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕೆಲವರು ಹೀಗೆ ಹೇಳೋದಾ?
ಅಷ್ಟಕ್ಕೂ ಅನುಶ್ರೀ ಸೆಲೆಬ್ರೆಟಿ ಆ್ಯಂಕರ್.. ಅವರ ಜತೆ ಅಭಿಮಾನದಿಂದ ಎಲ್ಲರೂ ಸೆಲ್ಫಿ ತೆಗೆದುಕೊಳ್ತಾರೆ. ಮಾತ್ರವಲ್ಲ ಕಷ್ಟ ಪಟ್ಟು ಮೇಲೆ ಬಂದ ಹುಡುಗಿ, ಹಲವು ಸವಾಲುಗಳನ್ನು ದಾಟಿ ಬಂದು ಮುನ್ನುಗ್ಗುತ್ತಾ ಮುಂದೆ ಸಾಗಿದವರು. ತಂದೆಯಿಲ್ಲದೇ ಬೆಳೆದ ನಿರೂಪಕಿಗೆ ಅನೇಕ ಸಮಸ್ಯೆಗಳು ಎದುರಾದವು. ಅವುಗಳನ್ನೆಲ್ಲಾ ತಲೆಗೆ ಹಾಕಿಕೊಳ್ಳದೇ ತಾನು ಆಯ್ತು,ತನ್ನ ಕೆಲಸವೂ ಆಯ್ತು ಎಂದು ಎಲ್ಲರಿಗೂ ಉತ್ತರ ಕೊಡುವಂತೆ ಬೆಳೆದು ನಿಂತರು. ಇದೀಗ ಅನುಶ್ರೀ ಹಾಗು ಸರಿಗಮಪ ಗಾಯಕ ಜಸ್ಕರಣ್ ಸಿಂಗ್ ಅವರ ಫೋಟೋಗಳಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಕಾಮೆಂಟ್ ಗಳು ಬಂದಿವೆ. ಆದರೆ ಅದರಲ್ಲಿ ಒಬ್ಬ ‘ಕೊನೆಗೂ ಅಕ್ಕನಿಗೆ ಒಳ್ಳೇ ಜೋಡಿ ಸಿಕ್ತು’ ಎಂದು ಕಾಮೆಂಟ್ ಮಾಡಿದ್ದಾನೆ.
ಇದಿಷ್ಟು ಮಾತ್ರವಲ್ಲ ಅದನ್ನು ಹಲವಾರು ಮಂದಿ ಲೈಕ್ ಕೂಡ ಮಾಡಿದ್ದಾರೆ. ‘ಹಲವರು ಬೆಸ್ಟ್ ಫೇರ್’ ಎಂದು ಸಹ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, ಸದ್ಯ ಅನುಶ್ರೀ-ಜಸ್ಕರಣ್ ಸಿಂಗ್ ಜೋಡಿ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದ್ದು ಟ್ರೆಂಡ್ ಸೃಷ್ಟಿಸುತ್ತಿದೆ. ಆದರೆ ಅನುಶ್ರೀಯವರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ. ಬೆನ್ನ ಹಿಂದೆ ಸಾವಿರಾರು ಜನ ಮಾತನಾಡಿಕೊಂಡರೂ ನಮ್ಮ ಗುರಿ ನಾವು ಯಾವತ್ತೂ ಮರೆಯಬಾರದು ಅನ್ನೋದರ ಬಗ್ಗೆ ಮಾತ್ರ ಸದ್ಯ ಯೋಚನೆ ಮಾಡುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


