nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ

    July 23, 2026

    ನೀಟ್ ಅಕ್ರಮ ಖಂಡಿಸಿ ಜುಲೈ 25ಕ್ಕೆ ತಿಪಟೂರಿನಲ್ಲಿ ಧರಣಿ ಸತ್ಯಾಗ್ರಹ: ಸಿ.ಬಿ. ಶಶಿಧರ್

    July 23, 2026

    ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ

    July 22, 2026
    Facebook Twitter Instagram
    ಟ್ರೆಂಡಿಂಗ್
    • ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ
    • ನೀಟ್ ಅಕ್ರಮ ಖಂಡಿಸಿ ಜುಲೈ 25ಕ್ಕೆ ತಿಪಟೂರಿನಲ್ಲಿ ಧರಣಿ ಸತ್ಯಾಗ್ರಹ: ಸಿ.ಬಿ. ಶಶಿಧರ್
    • ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ
    • ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
    • ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ
    • ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ
    • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರವೇಶಾತಿಗೆ ಅರ್ಜಿ ಆಹ್ವಾನ
    • ಗೋನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆ ಪ್ರಯೋಜನೆ ಪಡೆಯಲು ತೋಟಗಾರಿಕೆ ಇಲಾಖೆ ಮನವಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನೇಹಾ ಹತ್ಯೆ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಆರ್. ಅಶೋಕ್ ನೇತೃತ್ವದಲ್ಲಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ
    ರಾಜ್ಯ ಸುದ್ದಿ April 22, 2024

    ನೇಹಾ ಹತ್ಯೆ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಆರ್. ಅಶೋಕ್ ನೇತೃತ್ವದಲ್ಲಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

    By adminApril 22, 2024No Comments2 Mins Read
    thumakuru

    ತುಮಕೂರು: ನೇಹಾ ಹತ್ಯೆ ಖಂಡಿಸಿ ತುಮಕೂರಿನಲ್ಲಿ ಬಿಜೆಪಿ-ಜೆಡಿಎಸ್ ಪಕ್ಷದ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಆರ್. ಅಶೋಕ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

    ಜಿಲ್ಲಾಧಿಕಾರಿ ಕಚೇರಿ ಬಳಿ ಆರ್. ಅಶೋಕ್ ಮಾತನಾಡಿ, “ನೇಹಾ ಹತ್ಯೆ ಪ್ರಕರಣ ಇಡೀ ರಾಜ್ಯವೇ ತಲೆತಗ್ಗಿಸುವಂತಹ ವಿಚಾರವಾಗಿದ್ದು, ಇದರಲ್ಲಿ ಯಾರೂ ರಾಜಕೀಯ ಮಾಡೋಕೆ ಬಯಸೋದಿಲ್ಲ“ ಎಂದು ಹೇಳಿದರು.

    ಕಾಂಗ್ರೆಸ್ ನವರಿಗೆ ತಲೆ ಇದ್ದಿದ್ದಿದ್ರೆ ತಕ್ಷಣವೇ ಕ್ರಮ ತೆಗೆದುಕೊಳ್ತೀನಿ ಅಂತಾ ಹೇಳಬೇಕಿತ್ತು. ಪರಮೇಶ್ವರ್ ಅವರು ಹೇಳ್ತಾರೆ, “ಅವರು ಲವ್ ಮಾಡಿದ್ರು ಅಂತ. ನೀವಿರೋದು ತುಮಕೂರಿನಲ್ಲಿ, ಆ ಹುಡುಗಿ ಇರೋದು ಹುಬ್ಬಳ್ಳಿಯಲ್ಲಿ. ನೀವೇನಾದ್ರು ಅವರು ಪಾರ್ಕ್ ನಲ್ಲಿ ಕೂತಿರೋದನ್ನ ನೋಡಿದ್ರ” ಎಂದು ಟೀಕಿಸಿದರು.

    “ಅಥವಾ ನಿಮ್ಮ ಪೊಲೀಸರೇನಾದ್ರೂ ಹೋಗಿ ವೀಡಿಯೋ ಮಾಡಿದ್ರಾ? ಮೊದಲು ತನಿಖೆ ಮಾಡ್ತೀವಿ ನಂತರ ಏನು ಅಂತಾ ಹೇಳ್ತಿವಿ ಅಂತಾ ಹೇಳಬೇಕಿತ್ತು. ನಾನು ಅವರಿಗಿಂತ ಮೊದಲು ಗೃಹ ಸಚಿವನಾಗಿದ್ದೆ. ಯಡಿಯೂರಪ್ಪ ಸರ್ಕಾರದಲ್ಲಿಯೇ ಗೃಹ ಸಚಿವನಾಗಿದ್ದರು. ಅದು ದೇಶದಲ್ಲಿಯೇ ಅತ್ಯಂತ ಶಿಸ್ತುಯುತವಾದ ಇಲಾಖೆ. ಮುಖ್ಯಮಂತ್ರಿಗಿಂತ ಹೆಚ್ಚು ಜವಾಬ್ದಾರಿ ಇರುತ್ತೆ” ಎಂದರು.

    “ಅವರು ಇದು ಲವ್ ಕೇಸ್ ಅಂತಾ ಹೇಳ್ತಿದ್ದಾರೆ. ನಾವು ಅದನ್ನೇ ಹೇಳ್ತಿದ್ದೇವೆ ಇದು ಲವ್ ಕೇಸೇ. ಲವ್ ಜಿಹಾದ್ ಕೇಸ್ ಅಂತಾ ಹೇಳ್ತಿರೋದು. ಈ ಲವ್ ಜಿಹಾದ್ ಗೆ ಹೊರದೇಶಗಳಿಂದ ಫಂಡ್ ಬರ್ತಿದೆ” ಎಂದರು.

    ಡಿ.ಕೆ. ಶಿವಕುಮಾರ್ ಅವರು ಹೇಳ್ತಾರೆ “ಅವನು ನಮ್ಮ ಬ್ರದರ್ ಅವ್ನು. ಇಂತಹವರೇ ಡಿಕೆಶಿಯವರ ಬ್ರದರ್ ಗಳು ಎಂದರು.

    ಹಾವೇರಿಯಲ್ಲಿ ಮುಸ್ಲಿಂ ಮಹಿಳೆಯ ಮೇಲೆ 7 ಜನ ಗ್ಯಾಂಗ್ ರೇಪ್ ಮಾಡಿದ್ರು. ಆಗ ಯಾಕೆ ಹೋಗಿಲ್ಲ, ಯಾಕೆ ಕ್ರಮ ತಗೊಂಡಿಲ್ಲ ಎಂದರು.

    ಅವನಿಗೆ ಗುಂಡಿಕ್ಕುತ್ತೇವೆ ಅಂದ್ರೆ ಮುಸ್ಲಿಂ ನೂರು ಓಟ್ ಹಾಕಲ್ಲ. ಗುಂಡು ಹಾಕಲ್ಲ ಅಂದ್ರೆ ಹಿಂದೂ ಗಳು ವೋಟ್ ಹಾಕಲ್ಲ. ಹೀಗಾಗಿ ಕಾಂಗ್ರೆಸ್, ಸಿದ್ದರಾಮಯ್ಯ ನವರ ತಲೆ ಕೆಟ್ಟೋಗಿದೆ ಎಂದರು.

    ವೋಟ್ ಗೋಸ್ಕರ ದೇಶಕ್ಕೆ ಏನಾದರೂ ಆಗಲಿ. ಕಾಂಗ್ರೆಸ್ ನವರು ಕಾಂಪ್ರಮೈಸ್ ಆಗೋಕೆ ರೆಡಿ ಇದ್ದಾರೆ.  ಮೊನ್ನೆ ಎಂಜಿ ರೋಡ್ ನಲ್ಲಿ ಸಿನೆಮಾ ನಟರು ಹೋದ್ರೆ ಏಯ್ ನೀನೇಕೆ ಕನ್ನಡ ಮಾತಾಡ್ತೀಯಾ ಅಂತಾ ಹಲ್ಲೆ ಮಾಡಿದ್ದಾರೆ ಎಂದರು. ಕರ್ನಾಟಕದಲ್ಲಿ ಕನ್ನಡ ಮಾತಾಡೋಕೆ ಅವಕಾಶ ಇಲ್ಲ. ಇದು ತಾಲಿಬಾನ್ ಸರ್ಕಾರ. ಇಲ್ಲಿ ಹಿಂದೂಗಳ ಜೀವಕ್ಕೆ ಬೆಲೆಯಿಲ್ಲ. ಹಿಂದೂ ಹೆಣ್ಣುಮಕ್ಕಳಿಗೆ ಗೌರವವಿಲ್ಲ, ರಕ್ಷಣೆಯಿಲ್ಲ ಎಂದರು.

    ಇವತ್ತು ನಾವು ಕಾಂಗ್ರೆಸ್ ನವರು ಬಂದ್ರೆ ಡೇಂಜರ್ ಅಂತಾ ಜಾಹಿರಾತು ಕೊಟ್ಟಿದ್ದೀವಿ. ಸಿದ್ದರಾಮಯ್ಯ ಸರ್ಕಾರ ಬರ್ತಿದ್ದಂಗೆ ಬರಗಾಲ ಕೂಡ ಬಂತು. ಕಾಂಗ್ರೆಸ್ ನ ಚೊಂಬು ಇದ್ಯಲ್ಲ ಅದಕ್ಕೆ ಸ್ವಲ್ಪ ನೀರಾದ್ರೂ ಹಾಕಿ ಎಂದರು. ನಾಳೆ ಚಿಪ್ಪು ಜಾಹೀರಾತು ಕೊಡ್ತಾ ಇದ್ದೀವಿ  ಕಾಂಗ್ರೆಸ್ ನವರಿಗೆ ಚಿಪ್ಪೇ. ಚಿಪ್ಪು ಎಂದು ಘೋಷಣೆ ಕೂಗಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


    Provided by
    Provided by
    admin
    • Website

    Related Posts

    ತುಮಕೂರು: ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಹತ್ಯೆಗೆ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡನೆ

    July 20, 2026

    ಸಂಕಷ್ಟದಲ್ಲೂ ಕೈಬಿಡದ ಸಂಗಾತಿ: ದೇವೇಗೌಡರ 72 ವರ್ಷಗಳ ಪಯಣಕ್ಕೆ ನೆರಲಾಗಿದ್ದ ಚೆನ್ನಮ್ಮ

    July 19, 2026

    ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು

    July 18, 2026

    Comments are closed.

    Our Picks

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಕುಣಿಗಲ್: ಪಾವಸಂದ್ರ ಕಲ್ಲುಕ್ವಾರಿಯಲ್ಲಿ 12 ಜೀತದಾಳುಗಳ ರಕ್ಷಣೆ: ಉಪವಿಭಾಗಾಧಿಕಾರಿಗಳಿಂದ ವಿಮುಕ್ತಿ ಆದೇಶ

    July 23, 2026

    ತುಮಕೂರು :ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಪಾವಸಂದ್ರ ಗ್ರಾಮದ ಕಲ್ಲುಕ್ವಾರಿಯಲ್ಲಿ ಮುಂಗಡ ಹಣದ ನೆಪದಲ್ಲಿ ಕಳೆದ 25 ವರ್ಷಗಳಿಂದ…

    ನೀಟ್ ಅಕ್ರಮ ಖಂಡಿಸಿ ಜುಲೈ 25ಕ್ಕೆ ತಿಪಟೂರಿನಲ್ಲಿ ಧರಣಿ ಸತ್ಯಾಗ್ರಹ: ಸಿ.ಬಿ. ಶಶಿಧರ್

    July 23, 2026

    ಹಿರಿಯ ಪತ್ರಕರ್ತೆ, ಜಿ.ಪಂ. ಮಾಜಿ ಅಧ್ಯಕ್ಷೆ ಕಮಲಾ ಗಂಗಹನುಮಯ್ಯ ವಿಧಿವಶ

    July 22, 2026

    ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ

    July 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.