nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರು: ಸಾರ್ವಜನಿಕ ಶೌಚಾಲಯಗಳಿಗೆ ಬೀಗ; ಬಯಲು ವಿಸರ್ಜನೆಗೆ ಮೊರೆ ಹೋದ ಜನತೆ

    March 25, 2026

    ತುಮಕೂರು: ಚಿರತೆ ದಾಳಿಗೆ 20 ಕುರಿಗಳು ಬಲಿ; ಗ್ರಾಮಸ್ಥರಲ್ಲಿ ಆತಂಕ

    March 25, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Facebook Twitter Instagram
    ಟ್ರೆಂಡಿಂಗ್
    • ತಿಪಟೂರು: ಸಾರ್ವಜನಿಕ ಶೌಚಾಲಯಗಳಿಗೆ ಬೀಗ; ಬಯಲು ವಿಸರ್ಜನೆಗೆ ಮೊರೆ ಹೋದ ಜನತೆ
    • ತುಮಕೂರು: ಚಿರತೆ ದಾಳಿಗೆ 20 ಕುರಿಗಳು ಬಲಿ; ಗ್ರಾಮಸ್ಥರಲ್ಲಿ ಆತಂಕ
    • ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ
    • ಬೀದರ್: ಆನ್‌ ಲೈನ್ ಗೇಮ್ ಚಟಕ್ಕೆ ಬಲಿಯಾದ ಎಂಬಿಬಿಎಸ್ ವಿದ್ಯಾರ್ಥಿ
    • 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ನಿಷೇಧ: ಶೀಘ್ರದಲ್ಲೇ ಸಮಗ್ರ ಮಾರ್ಗಸೂಚಿ ಪ್ರಕಟ: ಸಚಿವ ಮಧು ಬಂಗಾರಪ್ಪ
    • ಇನ್ನೂ ಎರಡು ವರ್ಷ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸುತ್ತಾರೆ: ಸದನದಲ್ಲಿ ಸಚಿವ ಜಮೀರ್ ಅಹ್ಮದ್ ಘೋಷಣೆ
    • ಒಳಮೀಸಲಾತಿ: “ನಾಗಮೋಹನ್ ದಾಸ್  ಆಯೋಗದ ವರದಿ ಅವೈಜ್ಞಾನಿಕ”: ಮಾ.25ರಂದು ಬೃಹತ್ ಪ್ರತಿಭಟನೆ
    • ನಾಲ್ಕು ಹೆಣ್ಣುಮಕ್ಕಳ ತಾಯಿಗೆ ಸ್ವಯಂ ಉದ್ಯೋಗ: ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಕಾರ್ಯಕ್ಕೆ ಇಕ್ಬಾಲ್ ಅಹಮದ್ ಸಾಥ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೆಂಕಿ ಅನಾಹುತದಿಂದ ಮನೆ ಕಳೆದುಕೊಂಡವರಿಗೆ ನಿವೇಶನದ ಭರವಸೆ ನೀಡಿದ ಸಚಿವ ಪರಮೇಶ್ವರ್
    ಕೊರಟಗೆರೆ April 29, 2024

    ಬೆಂಕಿ ಅನಾಹುತದಿಂದ ಮನೆ ಕಳೆದುಕೊಂಡವರಿಗೆ ನಿವೇಶನದ ಭರವಸೆ ನೀಡಿದ ಸಚಿವ ಪರಮೇಶ್ವರ್

    By adminApril 29, 2024No Comments2 Mins Read
    g parameshwar
    • ನೊಂದ ಕುಟುಂಬಗಳಿಗೆ ಕರುಣೆ ತೋರಿ ಮಾದರಿಯಾದ ಸ್ವಾಮೀಜಿಗಳು

    ಕೊರಟಗೆರೆ : ಚುನಾವಣೆ ನೀತಿಸಂಹಿತೆ ಮುಗಿದ ತಕ್ಷಣವೇ ಚಿಂಪುಗಾನಹಳ್ಳಿಯ 9 ಎಕರೇ 30 ಗುಂಟೆ ಸರಕಾರಿ ಜಮೀನಿನಲ್ಲಿ ಪಶು ಆಸ್ಪತ್ರೆ, ಸರಕಾರಿ ಶಾಲೆ ಮತ್ತು ಬಡವರಿಗೆ ನಿವೇಶನಕ್ಕೆ ಲೇಔಟ್ ನಿರ್ಮಾಣ ಮಾಡ್ತಿನಿ. ಗುಡಿಸಲು ಕಳೆದುಕೊಂಡ ಜನರಿಗೆ ಕುಡಿಯುವ ನೀರು, ವಿದ್ಯುತ್ ಮತ್ತು ಮೂಲಸೌಲಭ್ಯ ಪೂರೈಸಲು ತಕ್ಷಣ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

    ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಂಪುಗಾನಹಳ್ಳಿ ಸಮೀಪ ವಿದ್ಯುತ್ ಅವಘಡದಿಂದ ಬೆಂಕಿಗೆ ಆಹುತಿಯಾಗಿದ್ದ ಸ್ಥಳಕ್ಕೆ ಭಾನುವಾರ ಸಿದ್ದರಬೇಟ್ಟ ಶ್ರೀಗಳ ಜೊತೆಯಲ್ಲಿ ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.


    Provided by
    Provided by

    ವರ್ಷದಲ್ಲಿ ಎರಡನೇ ಸಲ ಗುಡಿಸಲಿಗೆ ಬೆಂಕಿ ಬಿದ್ದು ಪ್ರಸ್ತುತ 10ಗುಡಿಸಲು ಸುಟ್ಟುಹೋಗಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಧವಸದಾನ್ಯ ನಾಶವಾಗಿವೆ. ಕಳೆದ ವರ್ಷವೇ ಭೇಟಿ ನೀಡಿ ನಿವೇಶನ ನೀಡುವ ಭರವಸೆ ನೀಡಿದ್ದೆ. ಈಗ ಪ್ರತಿ ಕುಟುಂಬಕ್ಕೆ 5 ಸಾವಿರ ಹಣ ನೀಡಿದ್ದೇನೆ. ಅಲೆಮಾರಿ ಕಾರ್ಮಿಕರು ಮತ್ತು ಹಂದಿಜೋಗ ಕುಟುಂಬಗಳಿಗೆ ತ್ವರಿತವಾಗಿ ನಿವೇಶನ ನೀಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ  ಎಂದು ಹೇಳಿದರು.

    ಸಿದ್ದರಬೆಟ್ಟ ಶ್ರೀಬಾಳೆಹೊನ್ನೂರು ಖಾಸಶಾಖ ಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ,  ಚಿಂಪುಗಾನಹಳ್ಳಿ ಸಮೀಪ ಎರಡನೇ ಸಲ ಬೆಂಕಿಯ ಅವಗಡ ಸಂಭವಿಸಿದೆ. ಬೆಂಕಿಯ ಅವಘಡದಿಂದ ಗುಡಿಸಲಿನಲ್ಲಿ ಶೇಖರಣೆ ಮಾಡಲಾಗಿದ್ದ ಲಕ್ಷಾಂತರ ರೂ ಮೌಲ್ಯದ ಬೆಳೆಬಾಳುವ ವಸ್ತುಗಳು ಬೆಂಕಿಗೆ ಆಹುತಿ ಆಗಿವೆ. ಸಂಕಷ್ಟಕ್ಕೆ ಸಿಲುಕಿದ ಬಡಜನರಿಗೆ ಸಹಾಯಹಸ್ತ ನೀಡುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯ ಎಂದು ಹೇಳಿದರು.

    g parameshwar

     ಶ್ರೀಗಳಿಂದ ಬಡಜನರಿಗೆ ನೆರವಿನ ಆಸರೆ:

    ಎಲೆರಾಂಪುರ ಶ್ರೀಮಠದಿಂದ 11 ಗುಡಿಸಲು ಕಳೆದುಕೊಂಡ ಬಡಜನರಿಗೆ ಆಹಾರದ ಕಿಟ್, ಬಟ್ಟೆ, ಚಾಪೆ  ಮತ್ತು ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಡಾ.ಹನುಮಂತನಾಥ ಸ್ವಾಮೀಜಿಗಳು  ವಿತರಣೆ ಮಾಡಿದರು. ಪಾವಗಡ ಶ್ರೀರಾಮಕೃಷ್ಣ ಸೇವಾಮಠದಿಂದ 8 ಸಾವಿರ ಮೌಲ್ಯದ ಪಾತ್ರೆ, ಬಟ್ಟೆ, ಸೀರೆ, ಪಂಚೆ, ಟವಲ್, ಅಕ್ಕಿ, ಬೆಳೆ, ಸಕ್ಕರೆ ಮತ್ತು ಸಾಂಬರ್ ಪದಾರ್ಥಗಳನ್ನು ಶ್ರೀಜಪಾನಂದಾ ಸ್ವಾಮೀಜಿಗಳು ವಿತರಣೆ ಮಾಡಿದರು. ಸಿದ್ದರಬೆಟ್ಟ ಶ್ರೀಮಠದಿಂದ ದಿನಸಿ ಪದಾರ್ಥ, ಪಾತ್ರೆ ಮತ್ತು ಬೇಟ್‍ ಶೀಟ್‍ ಗಳನ್ನು ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿಗಳು ವಿತರಣೆ ಮಾಡಿದರು.

    ನಿವೇಶನ ನೀಡಲು ಶ್ರೀಗಳ ಆಗ್ರಹ:

    ಕ್ಯಾಮೇನಹಳ್ಳಿ ಮತ್ತು ನೀಲಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಲೆಮಾರಿ ಕಾರ್ಮಿಕರು, ಹಂದಿಜೋಗರು ಕಳೆದ 25 ವರ್ಷದಿಂದ ನೆಲೆಸಿದ್ದಾರೆ. 30ಕ್ಕೂ ಅಧಿಕ ಕುಟುಂಬಗಳಿಗೆ ಸೌಲಭ್ಯಗಳೇ ಮರೀಚಿಕೆ ಆಗಿವೆ. ರಾತ್ರಿ ವೇಳೆ ಕತ್ತಲೆಯ ಜೀವನ ನರಕದಂತಿದೆ. ತಕ್ಷಣ ಸರಕಾರ ನಿವೇಶನ ಮತ್ತು ಮನೆ ಮಂಜೂರು ಮಾಡಬೇಕಿದೆ ಎಂದು ಎಲೆರಾಂಪುರದ ಶ್ರೀಹನುಮಂತನಾಥ ಸ್ವಾಮೀಜಿ, ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ಮತ್ತು ಪಾವಗಡದ ರಾಮಕೃಷ್ಣ ಸೇವಾಶ್ರಮದ ಶ್ರೀಜಪಾನಂದ ಜೀ ಆಗ್ರಹ ಮಾಡಿದ್ದಾರೆ.

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಜೂನ್ 21ರಂದು ಸಿದ್ದರಬೆಟ್ಟದಲ್ಲಿ ಉಚಿತ ಸಾಮೂಹಿಕ ಆದರ್ಶ ವಿವಾಹ: ನೋಂದಾಯಿಸುವುದು ಹೇಗೆ?

    March 23, 2026

    ಸಿದ್ದರಬೆಟ್ಟ ಶ್ರೀ ಮಠದ 20ನೇ ವರ್ಷದ ವಾರ್ಷಿಕೋತ್ಸವ: ಜೂನ್ 21ಕ್ಕೆ ಅದ್ಧೂರಿ ಕಾರ್ಯಕ್ರಮ, ಡಾ. ವೀರೇಂದ್ರ ಹೆಗ್ಗಡೆಯವರಿಗೆ ‘ಸಿದ್ಧ ಶ್ರೀ’ ಪ್ರಶಸ್ತಿ

    March 22, 2026

    ಟೀಕೆ ಟಿಪ್ಪಣಿಗಳಿಗೆ ಅಭಿವೃದ್ದಿಯೇ ಉತ್ತರ: ಗೃಹ ಸಚಿವ ಡಾ.ಜಿ.ಪರಮೇಶ್ವರ್

    March 16, 2026

    Comments are closed.

    Our Picks

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರು: ಸಾರ್ವಜನಿಕ ಶೌಚಾಲಯಗಳಿಗೆ ಬೀಗ; ಬಯಲು ವಿಸರ್ಜನೆಗೆ ಮೊರೆ ಹೋದ ಜನತೆ

    March 25, 2026

    ತಿಪಟೂರು: ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಶೌಚಾಲಯಗಳು ಬಳಕೆಗೆ ಮುಕ್ತವಾಗದೆ ಬೀಗ ಹಾಕಲ್ಪಟ್ಟಿವೆ. ಇದರಿಂದಾಗಿ ಸಾರ್ವಜನಿಕರು,…

    ತುಮಕೂರು: ಚಿರತೆ ದಾಳಿಗೆ 20 ಕುರಿಗಳು ಬಲಿ; ಗ್ರಾಮಸ್ಥರಲ್ಲಿ ಆತಂಕ

    March 25, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026

    ಬೀದರ್: ಆನ್‌ ಲೈನ್ ಗೇಮ್ ಚಟಕ್ಕೆ ಬಲಿಯಾದ ಎಂಬಿಬಿಎಸ್ ವಿದ್ಯಾರ್ಥಿ

    March 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.