nammatumakuru

    Subscribe to Updates

    Get the latest creative news from FooBar about art, design and business.

    What's Hot

    ಫೆ.23ರಂದು ಸಂಪೂರ್ಣ ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

    February 22, 2026

    ದೇವರು ಬಂದಂತೆ ನಾಟಕವಾಡಿ ದಲಿತ ನವದಂಪತಿಗೆ ಅವಮಾನ:  ಒಬ್ಬನ ಸೆರೆ, ಹಲವರ ವಿರುದ್ಧ ಪ್ರಕರಣ ದಾಖಲು

    February 22, 2026

    ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ

    February 21, 2026
    Facebook Twitter Instagram
    ಟ್ರೆಂಡಿಂಗ್
    • ಫೆ.23ರಂದು ಸಂಪೂರ್ಣ ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ
    • ದೇವರು ಬಂದಂತೆ ನಾಟಕವಾಡಿ ದಲಿತ ನವದಂಪತಿಗೆ ಅವಮಾನ:  ಒಬ್ಬನ ಸೆರೆ, ಹಲವರ ವಿರುದ್ಧ ಪ್ರಕರಣ ದಾಖಲು
    • ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ
    • ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು
    • ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ
    • ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ
    • ಪಂಚ ಗ್ಯಾರೆಂಟಿ, ‘ಲಂಚ ಗ್ಯಾರೆಂಟಿ’: ಸತೀಶ್ ಜಾರಕಿಹೊಳಿ ಹೇಳಿಕೆಯಲ್ಲೇ ಭ್ರಷ್ಟಾಚಾರಕ್ಕೆ ಸಾಕ್ಷಿ: ಬಿ.ವೈ.ವಿಜಯೇಂದ್ರ ವಾಗ್ದಾಳಿ
    • ವಿಕಲಚೇತನರಿಗೆ ರಾಜಕೀಯ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ: ಫೆ.22ರಂದು ತುಮಕೂರಿನಲ್ಲಿ ರ‍್ಯಾಲಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪೌರ ಕಾರ್ಮಿಕರ ಬಾಳಿನಲ್ಲಿ ಮೂಡಿದ ಹೊಸ ಅಧ್ಯಾಯ
    ಜಿಲ್ಲಾ ಸುದ್ದಿ May 28, 2024

    ಪೌರ ಕಾರ್ಮಿಕರ ಬಾಳಿನಲ್ಲಿ ಮೂಡಿದ ಹೊಸ ಅಧ್ಯಾಯ

    By adminMay 28, 2024No Comments2 Mins Read
    gangubai manakara

    ನನ್ನ ಮಕ್ಕಳು ಮತ್ತು ಸಂಸಾರವನ್ನು ಇತರೇ ಸರಕಾರಿ ನೌಕರರಂತೆ ಚೆನ್ನಾಗಿ ನೋಡಿಕೊಳ್ಳಬೇಕು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು, ಒಳ್ಳೆಯ ಜೀವನ ನಡೆಸಬೇಕು, ಉತ್ತಮ ವೇತನ ಪಡೆಯಬೇಕು ಎಂಬ ನನ್ನ ಎಲ್ಲಾ ಕನಸುಗಳು ಈಗಿನ ಜಿಲ್ಲಾಧಿಕಾರಿ ಬಂದ ಮೇಲೆ ನನಸಾಗಿದೆ ಎನ್ನುವ ಕಾರವಾರ ನಗರಸಭೆಯ ಪೌರಕಾರ್ಮಿಕ ನಾರಾಯಣ್ ಸೇರಿದಂತೆ ಕಾರವಾರ ನಗರಸಭೆಗೆ ಹೊಸದಾಗಿ ನೇಮಕಗೊಂಡ ಎಲ್ಲಾ ಪೌರಕಾರ್ಮಿಕರು ಜಿಲ್ಲಾಧಿಕಾರಿಗಳಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

    ಸರಕಾರಿ ನೌಕರರಿಗೆ ನೇಮಕಗೊಂಡವರಿಗೆ ಪ್ರತಿ ತಿಂಗಳು ಸಂಬಳ ಬರುತ್ತದೆ ಎನ್ನುವುದೇನೋ ಸರಿ, ಆದರೆ ವಿವಿಧ ಆಡಳಿತಾತ್ಮಕ ಕಾರಣಗಳಿಂದ ಸೇವೆಗೆ ಸೇರಿದ ಮೊದಲನೇ ತಿಂಗಳ ಸಂಬಳ ಪಡೆಯಲು ಹಲವು ತಿಂಗಳು ಕಾಯಬೇಕಾಗುವುದು ಅಷ್ಟೇ ಸತ್ಯ. ಆದರೆ ಕಾರವಾರ ನಗರಸಭೆಗೆ ಹೊಸದಾಗಿ ನೇಮಕಗೊಂಡ ಪೌರಕಾರ್ಮಿಕರಿಗೆ ನೇಮಕವಾದ ಒಂದೇ ತಿಂಗಳಿಗೆ ಮೊದಲ ತಿಂಗಳ ವೇತನ ದೊರೆಯುವಂತೆ ಮಾಡಿದ ಜಿಲ್ಲಾಧಿಕಾರಿಗಳಿಗೆ, ಮೊದಲ ವೇತನ ಪಡೆದ ಎಲ್ಲಾ ಪೌರಕಾರ್ಮಿಕರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಿಹಿತಿಂಡಿ ವಿತರಿಸಿ ಅವರಿಗೆ ಧನ್ಯವಾದ ತಿಳಿಸಿದರು.


    Provided by
    Provided by

    ಖಾಯಂ ನೌಕರರಾಗುವ ಮೊದಲು ತಾತ್ಕಾಲಿಕ, ಗುತ್ತಿಗೆ, ನೇರ ಪಾವತಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಪೌರಕಾರ್ಮಿಕರ ವೇತನ ಅತ್ಯಂತ ಕಡಿಮೆ ಇತ್ತು. ಖಾಯಂ ಆದ ನಂತರ ಪಡೆದ ಮೊದಲ ತಿಂಗಳ ವೇತನ ರೂ.26,185 ಅಲ್ಲದೇ ಪ್ರತೀ ತಿಂಗಳ ಸಂಕಷ್ಟ ಭತ್ಯೆ ರೂ.2000 ಗಳಂತೆ, ಒಂದು ವರ್ಷದ ಸಂಕಷ್ಟ ಭತ್ಯೆ ಮೊತ್ತವನ್ನು ಒಂದೇ ಬಾರಿಗೆ ರೂ.24,000 ಗಳನ್ನು ಪಾವತಿಸಲಾಗಿದ್ದು, ಇದರಿಂದಾಗಿ ಮೊದಲ ತಿಂಗಳು ಪಡೆದ ಒಟ್ಟು ಮೊತ್ತವೇ ರೂ.50,185 ಆಗಿದೆ. ಒಂದು ತಿಂಗಳಿಗೆ ಇಷ್ಟು ದೊಡ್ಡ ಮೊತ್ತದ ವೇತನ ಪಡೆಯುವುದು ಕನಸೇ ಆಗಿದ್ದ ಈ ಪೌರಕಾರ್ಮಿಕರ ಬಾಳಿನಲ್ಲಿ , ಈ ವೇತನ ಬದುಕಿನಲ್ಲಿ ನೆಮ್ಮದಿ ಹಾಗೂ ಸಂತೃಪ್ತಿಯ ಹೊಸ ಅಧ್ಯಾಯವನ್ನು ತೆರೆದಿದ್ದು, ಅವರು ಕಂಡಿದ್ದ ಎಲ್ಲಾ ಕನಸುಗಳು ನನಸಾಗುವ ಕಾಲ ಕೂಡಿ ಬಂದಿದೆ.

    ಮೊದಲ ತಿಂಗಳು ಪಡೆದ ಈ ವೇತನದ ಮೊತ್ತದಲ್ಲಿ ಮಗಳ ಮದುವೆಗೆ ಮಾಡಿದ್ದ ಸಾಲ ತೀರಿಸಿದ್ದೇನೆ. ಇನ್ನು ಮುಂದಿನ ತಿಂಗಳಿನಿಂದ ಬರುವ ವೇತನದಲ್ಲಿ ಹೆಚ್ಚಿನ ಮೊತ್ತವನ್ನು ಉಳಿತಾಯ ಮಾಡಲು ನಿರ್ಧರಿಸಿದ್ದೇನೆ. ನಮ್ಮನ್ನು ಖಾಯಂ ಆಗಿ ನೇಮಕ ಮಾಡಿದ ನಂತರವೂ ಜಿಲ್ಲಾಧಿಕಾರಿಗಳು ನಮ್ಮ ಬಗ್ಗೆ ಅತ್ಯಂತ ಕಾಳಜಿ ವಹಿಸಿ ನಮಗೆ ಮೊದಲ ತಿಂಗಳ ವೇತನ ಕೊಡಿಸುವವರೆಗೆ ಸದಾ ನಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ. ಅವರಿಗೆ ಧನ್ಯವಾದ ಹೇಳಲು ಹೋಗುವಾಗ ಖಾಲಿ ಕೈಯಲ್ಲಿ ಹೋಗುವುದು ಬೇಡವೆಂದು ಸಿಹಿ ತೆಗೆದುಕೊಂಡು ಹೋಗಿ, ಧನ್ಯವಾದ ಹೇಳಿದ್ದೇವೆ. ಉತ್ತಮ ರೀತಿಯಲ್ಲಿ ಕೆಲಸ ಮಾಡಿ, ಸಂಬಳದ ಮೊತ್ತವನ್ನು ದುಶ್ಚಟಗಳಿಗೆ ಹಾಳು ಮಾಡಬೇಡಿ, ಕುಟುಂಬದ ಒಳಿತಿಗಾಗಿ ಬಳಸಿ ಎಂದು ಬುದ್ದಿವಾದ ಹೇಳಿದ್ದಾರೆ ಎನ್ನುತ್ತಾರೆ ಪೌರ ಕಾರ್ಮಿಕ ಪ್ರಕಾಶ್..

    ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇದ್ದ 127 ಮಂದಿ ಪೌರ ಕಾರ್ಮಿಕ ಹುದ್ದೆಗಳಿಗೆ, ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೌರ ಕಾರ್ಮಿರನ್ನು ಖಾಯಂ ಗೊಳಿಸಿ 2024ರ ಮಾರ್ಚ್ ತಿಂಗಳಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಆದೇಶಿಸಿದ್ದರು.

     ಪೌರ ಕಾರ್ಮಿಕರ ಸೇವೆಯ ಬಗ್ಗೆ ಎಷ್ಟು ಹೊಗಳಿದರೂ ಕಡಿಮೆಯೇ. ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕರ ಉತ್ತಮ ಆರೋಗ್ಯಕ್ಕಾಗಿ , ತಮ್ಮ ಆರೋಗ್ಯವನ್ನು ಲೆಕ್ಕಿಸದೇ ದುಡಿಯುವ ಇವರೇ ನಿಜವಾದ ಶ್ರಮಜೀವಿಗಳು. ಇವರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲಾ ಸವಲತ್ತುಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವುದು ಎಲ್ಲರ ಕರ್ತವ್ಯ. ಖಾಯಂಗೊಂಡ ಪೌರಕಾರ್ಮಿಕರಿಗೆ ಮೊದಲ ತಿಂಗಳ ವೇತನಕ್ಕೆ ಯಾವುದೇ ಕಾರಣಕ್ಕೂ ಕಾಯಿಸುವುದು ಬೇಡ ಎಂದು ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ಆದಷ್ಟು ಶೀಘ್ರದಲ್ಲೇ ಅವರಿಗೆ ಮೊದಲನೇ ತಿಂಗಳ ವೇತನ ದೊರೆತಿದೆ. ತಮ್ಮ ಕರ್ತವ್ಯದ ಬಗ್ಗೆ ಹೆಮ್ಮೆ ಪಟ್ಟು, ಶ್ರದ್ದೆಯಿಂದ ಕೆಲಸ ಮಾಡುವಂತೆ ಮತ್ತು ಯಾವುದೇ ರೀತಿಯ ದುರಭ್ಯಾಸಗಳಿಗೆ ಬಲಿಯಾಗದೇ, ನಮ್ಮದಿಯ ಜೀವನ ನಡೆಸುವಂತೆ ಅವರಿಗೆ ತಿಳಿಸಲಾಗಿದೆ.

    — ಗಂಗೂಬಾಯಿ ಮಾನಕರ, ಆಡಳಿತಾಧಿಕಾರಿಗಳು, ಕಾರವಾರ ನಗರಸಭೆ ಹಾಗೂ ಜಿಲ್ಲಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಶೇ.99ರಷ್ಟು ಕಠಿಣ ಪರಿಶ್ರಮದಿಂದ ಸಾಧನೆ ಕಟ್ಟಿಟ್ಟ ಬುತ್ತಿ: ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಮತ

    February 21, 2026

    ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ

    February 21, 2026

    ಔರಾದ್: ಸಂತಪುರ ಗುರುಕುಲ ಶಾಲೆಯಲ್ಲಿ ರಾಷ್ಟ್ರೀಯ ಬಾಯಿ ಹಲ್ಲು ತಪಾಸಣೆ ಶಿಬಿರ

    February 20, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಫೆ.23ರಂದು ಸಂಪೂರ್ಣ ಒಳ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

    February 22, 2026

    ತುಮಕೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಆಗಸ್ಟ್ 1, 2024ರ ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಆಧಾರದ…

    ದೇವರು ಬಂದಂತೆ ನಾಟಕವಾಡಿ ದಲಿತ ನವದಂಪತಿಗೆ ಅವಮಾನ:  ಒಬ್ಬನ ಸೆರೆ, ಹಲವರ ವಿರುದ್ಧ ಪ್ರಕರಣ ದಾಖಲು

    February 22, 2026

    ಮಧುಗಿರಿ: ಬಸ್ ನಿಲ್ದಾಣಗಳಲ್ಲಿ ತಂಗುದಾಣಗಳ ಕೊರತೆ; ಪ್ರಯಾಣಿಕರ ಪರದಾಟ

    February 21, 2026

    ಮಧುಗಿರಿ: ಪಡಿತರ ತರಲು ತೆರಳುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಮಹಿಳೆ ಸಾವು

    February 21, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.